Premium Only Content
*ಜಿಲ್ಲಾಧಿಕಾರಿ ನಿವಾಸದಲ್ಲಿ 🌈 ಹೋಳಿ ಆಚರಣೆ; ಸಂಭ್ರಮ
*ಜಿಲ್ಲಾಧಿಕಾರಿ ನಿವಾಸದಲ್ಲಿ 🌈 ಹೋಳಿ ಆಚರಣೆ; ಸಂಭ್ರಮ*
ಕರ್ನಾಟಕ .ಮಾ15*ಪರಸ್ಪರ ಉತ್ತಮ ಸಂಬಂಧ ಮತ್ತು ಸಾಮರಸ್ಯಕ್ಕೆ ಹಬ್ಬಗಳ ಆಚರಣೆ ಅಗತ್ಯ: ಡಾ|| ವಿ. ರಾಮ್ ಪ್ರಸಾಥ್ ಮನೋಹರ*
ಹೋಳಿ ಹಬ್ಬದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಸಾಂಸ್ಕೃತಿಕ ಹೋಳಿ ಆಚರಿಸುವ ಮೂಲಕ ವಿಶೇಷವಾಗಿ ಹೋಳಿ ಬಣ್ಣದ ಹಬ್ಬ ಆಚರಿಸಿದರು.
#ಹೋಳಿ #ಬಣ್ಣ #ನೃತ್ಯ #ಬಣ್ಣದ #ಕಲಾ #ಹಾಡು #ಜಿಲ್ಲಾಧಿಕಾರಿ
ಸಾಂಸ್ಜೃತಿಕ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರು, ಕಲಾತಂಡಗಳು ಮತ್ತು ಸರಕಾರಿ ನೌಕರರು, ಹವ್ಯಾಸಿ ಹಾಡುಗಾರರು ಹೋಳಿ ಹಬ್ಬದ, ಜಾನಪದ ಹಾಗೂ ಭಾವಗೀತೆಗಳನ್ನು ಹಾಡಿದರು.
ಪೊಲೀಸ ಆಯುಕ್ತ ಎನ್.ಶಶಿಕುಮಾರ ಹಾಗೂ ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾವಗೀತೆ, ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಉತ್ತರ ಕರ್ನಾಟಕದ ಹೋಳಿ ಹಬ್ಬಕ್ಕೆ ವಿಶೇಷವಾದ ಮಹತ್ವ ಮತ್ತು ಪ್ರಸಿದ್ದಿ ಇದೆ. ಹೋಳಿ ಹಬ್ಬದಲ್ಲಿ ಜೀವನದ ಸಂದೇಶವಿದೆ. ಕೆಟ್ಟ ಗುಣಗಳನ್ನು ಬಿಟ್ಟು, ಉತ್ತಮವಾದ ಗುಣಗಳನ್ನು ಉಳಿಸಿ, ಬೇಳೆಸಿಕೊಳ್ಳವ ಪಾಠವಿದೆ. ಬಣ್ಣಗಳು ಬದುಕಿನ ಮೌಲ್ಯಗಳ ಸೌಂದರ್ಯ ಮತ್ತು ಶ್ರೀಮಂತಿಕೆಯನ್ನು ತೋರಿಸುತ್ತವೆ ಎಂದರು.
ಹೋಳಿ ಅಂದ್ರೆ, ಬರೀ ಬಣ್ಣ ಆಡಿ, ಮನೆಗೆ ಹೊದರೆ ಸಾಲದು. ಅದರ ಆಚರಣೆ, ಅದರಲ್ಲಿನ ಜೀವನ ಪಾಠಗಳನ್ನು ತಿಳಿಯಬೇಕು. ಅದಕ್ಕಾಗಿ ಹೋಳಿ ಹಬ್ಬವನ್ನು ಸಾಂಸ್ಕೃತಿಕವಾಗಿ ಮತ್ತು ಹಾಡು, ಕಥೆಗಳ ಮೂಲಕ ಸಾಂಪ್ರದಾಯಿಕವಾಗಿ ಇಂದು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ ಆಡಳಿತಾಧಿಕಾರಿ ಡಾ|| ವಿ.ರಾಮ್ ಪ್ರಸಾಥ್ ಮನೋಹರ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಒಂದೆಡೆ ಸೇರಿ, ಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ. ಹಬ್ಬ ಹರಿದಿನಗಳ ಆಚರಣೆ ಸಮಯದಲ್ಲಿ ಯಾವ ಬೇದಭಾವಗಳಿಲ್ಲದೆ ಎಲ್ಲರೂ ಬೇರೆಯುವದರಿಂದ ಸಾಮರಸ್ಯ, ಸರಳತೆ, ಆಪ್ತತೆ ಹೆಚ್ಚುತ್ತದೆ. ನಾವು ಮಾಡುವ ಕರ್ತವ್ಯದಲ್ಲಿ ಧನ್ಯತೆ ಮೂಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅವರು ಜಿಲ್ಲೆಯ ಎಲ್ಲ ಸರಕಾರಿ ನೌಕರರಿಗೆ, ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಸಾವಿರ ಹಾಡುಗಳ ಸರದಾರಿಣಿ ಮಲ್ಲಮ್ಮ ಕುಂಬಾರ, ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಭಾವೈಕ್ಯದ ಹಾಡುಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಇಮಾಮಸಾಬ ವಲ್ಲೆಪ್ಪನವರ ಮತ್ತು ಕಲಘಟಗಿ ತಾಲೂಕಿನ ಸೂರಶಟ್ಟಿಕೊಪ್ಪದ ಜಾನಪದ ತಜ್ಞ, ದೇಸಿ ಹಾಡುಗಾರ ಕಬ್ಬೇರಗೌಡ ಮರಳಿ ಅವರು ತಮ್ಮ ತಂಡಗಳೊಂದಿಗೆ ಹೋಳಿ ಹಾಡು, ಉತ್ತರ ಕರ್ನಾಟಕದ ಜಾನಪದ ಹಾಡುಗಳನ್ನು ಸಂಗೀತ ಪರಿಕರದೊಂದಿಗೆ ಅರ್ಥಪೂರ್ಣವಾಗಿ, ಉತ್ತಮವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ||ವಿ.ರಾಮ್ ಪ್ರಸಾಥ್ ಮನೋಹರ ಅವರು ಜಾನಪದ ಕಲಾವಿದರನ್ನು ಫಲಪುಷ್ಪ ನೀಡಿ, ಗೌರವಿಸಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಪುತ್ರಿ, ದಯಾ ರಾಮ್ ನಾಗಲೀಲಾ ಅವರು ಶ್ಲೋಕದೊಂದಿಗೆ ಪ್ರಾರ್ಥಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಅವರು ಕಾರ್ಯಕ್ರಮ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ವಂದಿಸಿದರು.
ಸಾಂಸ್ಕೃತಿಕ ಹೋಳಿ ಹಬ್ಬದಲ್ಲಿ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ ಆಯುಕ್ತ ಮಾನಿಂಗ ನಂದಗಾವಿ, ಮಹಾನಗರಪಾಲಿಕೆ ಆಯುಕ್ತ ಡಾ. ರುದ್ರೇಶ ಗಾಳಿ, ಡಿಮಾನ್ಸ್ ಆಡಳಿತಾಧಿಕಾರಿ ಮೇಜರ ಸಿದ್ದಲಿಂಗಯ್ಯ ಹಿರೇಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಜಿ.ಪಂ.ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಾದ ರೇಖಾ ಡೊಳ್ಳಿನವರ, ಡಾ. ಶಶಿ ಪಾಟೀಲ, ಡಾ.ಸುಜಾತಾ ಹಸವೀಮಠ, ಇ.ಇ. ಪ್ರಶಾಂತ ಪಾಟೀಲ, ಎಲ್ಲ ತಹಶಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಪಿಐ ದಯಾನಂದ, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ನೌಕರ ಸಂಘದ ಪದಾಧಿಕಾರಿಗಳು, ಕಂದಾಯ ನೌಕರ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಮಹಿಳಾ ಮತ್ತು ಪುರುಷ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
*****************
#karnataka #state #jds #bjp #minister #Bengaluru #ರಾಜ್ಯ #ಸಚಿವ #ಜಿಲ್ಲಾಧಿಕಾರಿ #ಅಧಿಕಾರಿ #ಮಂತ್ರಿ #ಸಭೆ #ಕಾರ್ಯಕ್ರಮ #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನಾ #ಮುನಿಸ್ವಾಮಿ #ಗೌಡ
https://whatsapp.com/channel/0029VacbYbeCMY0C0whFMu13
-
LIVE
Spartan
17 hours agoFirst playthrough of First Berserker Khazan
240 watching -
Phyxicx
12 hours agoHappy Halloween! Scary game Visage! Then Waifu Dungeon! - 10/31/2025
11.8K -
49:47
Brad Owen Poker
21 hours agoI Get My First BIIGGG Win! $25,000+ Buy-in! HORSE Championship! Don’t Miss! Poker Vlog Ep 324
6.36K1 -
5:14:08
BBQPenguin_
7 hours agoARC RAIDERS LIVE: High-Stakes Extraction & PvPvE! (First Run)
8.68K1 -
9:53
Rethinking the Dollar
21 hours agoWhen Detroit Bleeds, America Suffer! Layoffs Have Begun
9.92K11 -
18:36
Clownfish TV
1 day agoYouTube Just NERFED YouTube Gaming... | Clownfish TV
11.3K21 -
10:26
Silver Dragons
18 hours agoSilver is TAKING OFF Around the World
11.4K4 -
1:36
From Zero → Viral with AI
1 day ago $1.96 earnedAI in Content Creation & Discovery – The New Era of Marketing
12.2K1 -
1:20:10
FreshandFit
12 hours agoMiami Halloween Street Debate
216K114 -
2:06:16
TimcastIRL
16 hours agoTrump Calls For NUCLEAR OPTION, END Filibuster Over Food Stamp Crisis | Timcast IRL
226K190