sri ganesh

4 months ago
11

*ಎಲ್ಲಿದೆ ಶ್ರೀ ಕಮಂಡಲ ಗಣಪತಿ ದೇವಸ್ಥಾನ*

ಶ್ರೀ ಕಮಂಡಲ ಗಣಪತಿ ದೇವಸ್ಥಾನವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ 4 ಕಿಲೋಮೀಟರ್ ದೂರದಲ್ಲಿರುವ ಕೆಸವೆ ಎಂಬ ಪುಟ್ಟಗ್ರಾಮದಲ್ಲಿದೆ.

ಕಮಂಡಲ ಗಣಪತಿ ದೇವಸ್ಥಾನವು ಒಂದು ಪ್ರಾಚೀನ ದೇವಾಲಯವಾಗಿದೆ . ಕೊಪ್ಪ ತಾಲೂಕು ಸಹ್ಯಾದ್ರಿ ಬೆಟ್ಟಗಳಿಂದ ಆವೃತವಾಗಿದ್ದು ಸಮುದ್ರ ಮಟ್ಟದಿಂದ 763 ಮೀಟರ್ ಎತ್ತರದಲ್ಲಿದೆ. ಆಹ್ಲಾದಕರ ಹವಾಮಾನ ಮತ್ತು ಸುಂದರ ನೋಟಗಳನ್ನು ಈ ಸ್ಥಳ ಹೊಂದಿದೆ.
#ಕಮಂಡಲ #ಗಣಪತಿ #ದೇವಸ್ಥಾನದಇತಿಹಾಸ
#ಶನಿ #ಗ್ರಹ #ದುಷ್ಟಪರಿಣಾಮ #ಪರಶಿವನ #ಪಾರ್ವತಿದೇವಿ #ಮುಕ್ತಿಪಡೆಯಲು #ಭೂಲೋಕ #ತಪಸ್ಸು #ganeshchaturthi #ganeshutsav #ganeshfestival #ganesha🙏 #ganaseguidores #ganapati #ganapath #jaiganesh

ಕಮಂಡಲ ಗಣಪತಿ ದೇವಸ್ಥಾನದ ಇತಿಹಾಸ:-
ಶ್ರೀ ಶನೀಶ್ವರ ಗ್ರಹದ ದುಷ್ಟ ಪರಿಣಾಮಗಳಿಂದ, ಪರಶಿವನ ಮಡದಿ ಪಾರ್ವತಿ ದೇವಿಯು ಒಮ್ಮೆ ತೊಂದರೆಗೀಡಾದಳು. ಶನಿಯ ಹಿಡಿತದಿಂದ ಮುಕ್ತಿ ಪಡೆಯಲು, ದೇವರುಗಳ ಸಲಹೆಯಂತೆ ಭೂಲೋಕದಲ್ಲಿ ತಪಸ್ಸು ಮಾಡಲು ದೇವಿಯು ನಿರ್ಧರಿಸಿದಳು.

ಹೀಗೆ ಅವಳು ನಿರ್ಧರಿಸಿದ ಸ್ಥಳ ಈ ದೇವಾಲಯವಾಗಿದೆ, ತನ್ನ ತಪಸ್ಸಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕಲು, ಪಾರ್ವತಿ ದೇವಿಯು ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲು ಬಯಸಿದಳು.

ಹೀಗೆ ಪೂಜೆ ಸಲ್ಲಿಸಲು ಆಯ್ಕೆ ಮಾಡಿದ ಸ್ಥಳದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿದಳು. ಪಾರ್ವತಿಯ ನಿರ್ಧಾರದಿಂದ ಸಂತಸಗೊಂಡ ಬ್ರಹ್ಮನು ಸ್ಥಳದಲ್ಲೇ ಕಾಣಿಸಿಕೊಂಡನು ಮತ್ತು ಅವಳನ್ನು ಆಶೀರ್ವದಿಸುವ ಕ್ರಿಯೆಯಾಗಿ, ತನ್ನ ಕಮಂಡಲದಿಂದ (ಪವಿತ್ರ ಪಾತ್ರೆಯ) ಸ ನೀರನ್ನು ಚಿಮುಕಿಸಿದನು. ಶೀಘ್ರದಲ್ಲೇ ಪಾರ್ವತಿ ದೇವಿಯು ಪ್ರತಿಷ್ಠಾಪಿಸಿದ ಗಣೇಶನ ಮುಂದೆ ಬ್ರಾಹ್ಮಿ ಎಂಬ ನದಿಯು ಹೊರಹೊಮ್ಮಿತು. ಆದ್ದರಿಂದ, ಇಲ್ಲಿನ ಗಣೇಶನನ್ನು ಕಮಂಡಲ ಗಣಪತಿ ಎಂದು ಕರೆಯಲಾಯಿತು .ಮತ್ತು ದೇವಾಲಯಕ್ಕೆ ಕಮಂಡಲ ಗಣಪತಿ ದೇವಾಲಯ ಎಂದು ಹೆಸರು ಬಂದಿತು.

ಕಮಂಡಲ ತೀರ್ಥವಾಗಿ ಬ್ರಾಹ್ಮೀ ನದಿ:-
ಪಾರ್ವತಿ ದೇವಿಯು ಪ್ರತಿಷ್ಠಾಪಿಸಿದ ಗಣೇಶನ ಪಾದಗಳ ಮೇಲೆ ಬ್ರಹ್ಮ ದೇವರ ಕಮಂಡಲದಿಂದ ನೀರನ್ನು ಚಿಮುಕಿಸುವುದರಿಂದ ಬ್ರಾಹ್ಮಿ ನದಿ ಹುಟ್ಟಿಕೊಂಡಿದ್ದರಿಂದ, ಇದು ಕಮಂಡಲ ತೀರ್ಥ ಎಂದು ಪ್ರಸಿದ್ಧವಾಯಿತು. ಬ್ರಹ್ಮ ದೇವರು ಇದನ್ನು ಸೃಷ್ಟಿಸಿದ್ದರಿಂದ ಈ ನದಿಗೆ ಬ್ರಾಹ್ಮಿ ಎಂಬ ಹೆಸರೂ ಬಂದಿತು.

ಹೂವಿನ ದಳಗಳಂತೆ ಕೆತ್ತಿದ ಸಣ್ಣ ಚೌಕಾಕಾರದ ಕಲ್ಲಿನ ವೇದಿಕೆಯ ರಂಧ್ರದಿಂದ ಬ್ರಾಹ್ಮಿ ನದಿ ಹುಟ್ಟುತ್ತದೆ. ವರ್ಷದ ಯಾವುದೇ ದಿನ ಹೋದರೂ ಇಲ್ಲಿ ಉಕ್ಕುವ ಜಲಧಾರೆ ಕಾಣಬಹುದು, ಇಲ್ಲಿಂದ ನೀರು ನಿರಂತರವಾಗಿ ಚಿಮ್ಮುತ್ತದೆ ಎಂಬುದು ಒಂದು ನಿಗೂಢತೆಯಾಗಿದೆ.

ಇಲ್ಲಿನದು ಯೋಗ ಮುದ್ರೆ ಗಣಪ:- ಕಮಂಡಲ ಗಣಪತಿಯು ಚಕ್ಕಲು-ಬಕ್ಕಲು ಹಾಕಿಕೊಂಡು ಯೋಗದ ಭಂಗಿಯಲ್ಲಿದ್ದಾನೆ. ಇಲ್ಲಿನ ವಿಘ್ನ ವಿನಾಶಕನ ಅತ್ಯಪರೂಪ ಮೂರ್ತಿ ಸಿಗೋದು ತುಂಬಾ ವಿರಳವಂತೆ. ಈ ರೀತಿಯ ವಿಗ್ರಹ ಬೇರೆ ಯಾವ ದೇವಸ್ಥಾನದಲ್ಲಿಯೂ ಕಾಣಸಿಗದು. ಈ ಗಣೇಶನ ವಿಗ್ರಹದ ಮುಂದೆ ಒಂದು ಕಮಲದ ಆಕಾರವಿರುವ ತೀರ್ಥ ಕುಂಡವೂ ಇದೆ. ಗಣೇಶನ ಮುಂದೆ ಕಮಲದ ಹೂವಿನಿಂದ ಉದ್ಭವದಂತೆ ಕಾಣುವ ತೀರ್ಥಕುಂಡವಿರುವುದರಿಂದ ಇಲ್ಲಿರುವ ಗಣೇಶನಿಗೆ ಕಮಂಡಲ ಗಣೇಶ ಎಂಬ ಹೆಸರು ಬಂದಿದೆ ಅಂತಲೂ ಹೇಳುತ್ತಾರೆ.

ಈ ನೀರಲ್ಲಿ ಸ್ನಾನ ಮಾಡಿದ್ರೆ ಶನಿ ದೋಷ ಪರಿಹಾರವಾಗುತ್ತದಂತೆ. ಓದುವ ಮಕ್ಕಳು ಇಲ್ಲಿನ ತೀರ್ಥ ಕುಡಿದ್ರೆ ಜ್ಞಾಪಕ ಶಕ್ತಿಯ ಜೊತೆ ಓದು ತಲೆಗೆ ಹತ್ತುತ್ತೆ ಎಂಬ ನಂಬಿಕೆಯೂ ಇದೆ.

ಈ ದೇವಾಲಯಕ್ಕೆ ಬಂದ ಪ್ರತಿಯೊಬ್ಬ ಭಕ್ತರು ಮೃಗವಧೆ ಸ್ಥಳಕ್ಕೆ ಹೋಗಿ ಅಲ್ಲಿಂದ ಇಲ್ಲಿಗೆ ಬಂದು ಪೂಜೆ ಮಾಡಿಸಿದ್ರೆ ಒಳ್ಳೆಯದಾಗುತ್ತಂತೆ. ಶೃಂಗೇರಿ ಹಾಗೂ ಹೊರನಾಡಿಗೆ ಬರುವ ಪ್ರವಾಸಿಗರಲ್ಲಿ ಈ ಕ್ಷೇತ್ರದ ಮಹಿಮೆ ಗೊತ್ತಿರುವವರು ಇಲ್ಲಿಗೆ ಬರುವುದನ್ನು ಮರೆಯೋದಿಲ್ಲ.

ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯದ ಮಧ್ಯೆ ನೆಲೆ ನಿಂತಿರುವ ಈ ಗಣೇಶ ಪವಾಡವನ್ನೂ ಸೃಷ್ಟಿಸುತ್ತಾನಂತೆ.ಯೋಗ ಮುದ್ರೆಯ ಗಣೇಶನಿಗೆ ಹರಕೆ ಕಟ್ಟಿದ್ರೆ ಬೇಡಿದ ಹರಕೆ ಈಡೇರುತ್ತಂತೆ, ಅನೇಕ ಸೋಜಿಗಗಳನ್ನು ಹೊಂದಿರುವ ಈ ಪುರಾಣ ಪ್ರಸಿದ್ಧ ಗಣೇಶನಿಗೆ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದಲೇ ಭಕ್ತಾದಿಗಳು ಬರುತ್ತಾರೆ.

https://youtube.com/shorts/0WW43UmKxRQ?si=W2rzx8mbU19qVKUq

Loading comments...