Premium Only Content

jai maa
POK ಭಾರತದ ವಶವಾಗುವುದು ನಿಶ್ಚಿತ*ಆಪರೇಷನ್ ಸಿಂಧೂರ ಹೆಸರನ್ನೇ ಯಾಕೆ ಇಡಲಾಯಿತು ಗೊತ್ತಾ? ಪಹಲ್ಗಾಮ್ ದಾಳಿಗೆ ಭಾರತದಿಂದ ಪ್ರತೀಕಾರ ಪಾಕಿಸ್ತಾನ, ಪಿಒಕೆಯಲ್ಲಿನ 9 ಉಗ್ರರ ನೆಲೆಗಳು ಉಡೀಸ್*
ಭಾರತ, ಮೇ 07:26 ಸಹೋದರಿಯರ ಕುಂಕುಮ ಅಳಿಸಿದ್ದಕ್ಕೆ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ (Operation Sindoor) ಎಂಬ ಹೆಸರನ್ನು ಇರಿಸಿ ಯಶಸ್ವಿಯಾಗಿ ಏರ್‌ಸ್ಟ್ರೈಕ್ (Air Strike) ಮಾಡಿದೆ.
*ಆಪರೇಷನ್ ಸಿಂಧೂರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ; ದಶಕಗಳ ಸಮಸ್ಯೆಗೆ ಶೀಘ್ರ ಪರಿಹಾರ,
#pib.gov.in #PressRelease #Page #aspx
#IndianArmedForces #launched #OperationSindoor #hittingterrorist #Pakistan #JammuandKashmir #terroristattacks #againstIndia
#Altogether #ninesites ₹targeted. #OPERATIONSINDOOR’,
#Readmore: #PahalgamAttack
#uspresident #donaldtrump #indiasoperation #sindoorstrikes 181746578421228.html?#whatsappChannel
,*ಭಾ
ರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದವು, ಅಲ್ಲಿಂದ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿದೆ ಮತ್ತು ನಿರ್ದೇಶಿಸಲಾಗಿದೆ.*
ಒಟ್ಟಾರೆಯಾಗಿ, ಒಂಬತ್ತು (9) ಸ್ಥಳಗಳನ್ನು ಗುರಿಯಾಗಿಸಲಾಗಿದೆ.
‘ಆಪರೇಷನ್ ಸಿಂದೂರ್’ ಕುರಿತು ಇಂದು ನಂತರ ವಿವರವಾದ ಮಾಹಿತಿ ನೀಡಲಾಗುವುದು ಎಂದು ಸೇನೆ ತಿಳಿಸಿದೆ.
ರಕ್ಷಣಾ ತಜ್ಞರ ಪ್ರಕಾರ, ಪಹಲ್ಗಾಮ್‌ನಲ್ಲಿ, ಭಯೋತ್ಪಾದಕರು ಕೆಲವು ದಿನಗಳ ಹಿಂದೆ ಮದುವೆಯಾದ ಅನೇಕ ಜನರನ್ನು ಗರಿಯಾಗಿಸಿ ಹತ್ಯೆ ಮಾಡಿದ್ದಾರೆ. ಆದ ಕಾರಣ ಭಾರತವು ಈ ಮಹಿಳೆಯರ ಕಣ್ಣಲ್ಲಿ ಕಣ್ಣೀರು ಕಂಡಿತ್ತು. ತದ ನಂತರ ಪ್ರತಿಯೊಂದು ಕಣ್ಣೀರಿಗೂ ಲೆಕ್ಕ ನೀಡಲಾಗುವುದು ಎಂದು ಪ್ರತಿಜ್ಞೆ ಮಾಡಿದ ಭಾರತವು, ಅವರ ಕಣ್ಣಿರಿಗೆ ನ್ಯಾಯ ನೀಡಿದೆ. ಅವರಲ್ಲಿ ಗುರುಗ್ರಾಮದ ಹಿಮಾಂಶಿ ನರ್ವಾಲ್ ಕೂಡ ಒಬ್ಬರು, ಏಪ್ರಿಲ್ 16 ರಂದು ವಿವಾಹವಾಗಿದ್ದ ಅವರು ತಮ್ಮ ಪತಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರೊಂದಿಗೆ ಹನಿಮೂನ್‌ಗೆಂದು ಬಂದಿದ್ದರು, ಈ ವೇಳೆ, ಭಯೋತ್ಪಾದಕರು ವಿನಯ್‌ನನ್ನು ಭೀಕರವಾಗಿ ಕೊಂದರು.
ಅದೇ ರೀತಿ, ಜೈಪುರದ ಪ್ರಿಯಾಂಕಾ ಶರ್ಮಾ ಅವರು ತಮ್ಮ ಪತಿ ರೋಹಿತ್ ಜೊತೆ ಹನಿಮೂನ್ ಆಚರಿಸಲು ಪಹಲ್ಗಾಮ್ ಗೆ ಹೋಗಿದ್ದರು. ಆದರಂತೆ, ದಾಳಿಯ ಸಮಯದಲ್ಲಿ ರೋಹಿತ್ ಮೇಲೆ ಗುಂಡು ಹಾರಿಸಿ ಉಗ್ರರರು ಹತ್ಯೆ ಮಾಡಿದ್ದರು. ಜೊತೆಗೆ ಪ್ರಿಯಾಂಕಾ ಅವರು ಸಹ ಗಾಯಗೊಂಡಿದ್ದು, ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಶಿಮ್ಲಾ ನಿವಾಸಿ ಅಂಜಲಿ ಠಾಕೂರ್ ಅವರು ತಮ್ಮ ಪತಿ ವಿವೇಕ್ ಠಾಕೂರ್ ಜೊತೆ ಪ್ರವಾಸಕ್ಕೆಂದು ತೆರಳಿದ್ದರು, ಅವರು ಸಹ ಇದೇ ವರ್ಷದ ಏಪ್ರಿಲ್ 12 ರಂದು ವಿವಾಹವಾಗಿದರು. ಆ ಕಾರಣದಿಂದ ವಿವೇಕ್ ಮತ್ತು ಅಂಜಲಿ ಅವರು ಪಹಲ್ಗಾಮ್‌ನಲ್ಲಿ ಹನಿಮೂನ್ಗೆಂದು ಬಂದಿದ್ದರು, ಆದರೆ ಭಯೋತ್ಪಾದಕರು ಅವರನ್ನೂ ಬಿಡಲಿಲ್ಲ. ಅದೃಷ್ಟವಶಾತ್ ಅಂಜಲಿ ಅವರು ಹೇಗೋ ಬದುಕುಳಿದು, "ನಮ್ಮ ಜೀವನ ಆರಂಭವಾಗುವ ಮೊದಲೇ ಕೊನೆಗೊಂಡಿತು. ಅವರ ಮಾತುಗಳು ಎಲ್ಲರನ್ನೂ ಬೆಚ್ಚಿಬೀಳಿಸಿತು" ಎಂದು ಹೇಳಿದರು
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏರ್‌ಸ್ಟ್ರೈಕ್ ನಡೆಸಿದೆ. ಆಪರೇಷನ್ ಸಿಂಧೂರದ ಮೂಲಕ 9 ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಲಾಗಿದ್ದು, 12 ಉಗ್ರರು ಹತರಾಗಿದ್ದಾರೆ ಮತ್ತು 55 ಮಂದಿ ಗಾಯಗೊಂಡಿದ್ದಾರೆ. ಭಾರತವು ದಾಳಿಯ ಮುಂಚೆಯೇ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ಮಾಹಿತಿ ನೀಡಿತ್ತು, ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಹೇಳಿದಂತೆ ನಡೆದುಕೊಂಡಿದ್ದೇವೆ ಎಂದ ಭಾರತ!
ಸ್ವಲ್ಪ ಸಮಯದ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು 9 ನೆಲೆಗಳ ಮೇಲೆ ಏರ್‌ಸ್ಟ್ರೈಕ್ ನಡೆಸಲಾಗಿದೆ. ನಮ್ಮ ಕ್ರಮಗಳು ಕೇಂದ್ರೀಕೃತವಾಗಿವೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ಮಾಡಿಲ್ಲ. ಗುರಿಗಳ ಆಯ್ಕೆ ಮತ್ತು ಕ್ರಮ ತೆಗೆದುಕೊಂಡ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ತೋರಿಸಿದೆ. ಪಹಲ್ಗಾಮ್‌ನಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಉಗ್ರರು ಗುಂಡಿಕ್ಕಿ ಕೊಂದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂಬ ಬದ್ಧತೆಗೆ ಅನುಗುಣವಾಗಿ ನಾವು ನಡೆದುಕೊಂಡಿದ್ದೇವೆ ಎಂದು ಭಾರತ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಲಷ್ಕರೆ, ಜೈಶೆ ನೆಲೆಗಳು ಉಡೀಸ್!
ಆಪರೇಷನ್ ಸಿಂಧೂರ ಯಶಸ್ವಿಯಾದ ಬೆನ್ನಲ್ಲೇ ಭಾರತೀಯ ಸೇನೆ Justice Served, ಜೈ ಹಿಂದ್ ಎಂದು ಟ್ವೀಟ್ ಮಾಡಿದೆ. ಈ ಹಿಂದೆ ಉರಿ ದಾಳಿಗೆ 11 ದಿನದಲ್ಲಿ ಪ್ರತೀಕಾರ, ಪುಲ್ವಾಮಾ ದಾಳಿಗೆ 12 ದಿನಗಳಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದ ಭಾರತ ಪಹಲ್ಗಾಮ್ ದಾಳಿಗೆ ಸರಿಯಾಗಿ 15 ದಿನಗಳಲ್ಲಿ ಪ್ರತೀಕಾರ ತೀರಿಸಿಕೊಂಡಿದೆ. ಭಾರತ ದಾಳಿ ನಡೆಸಿರುವ ಮುರಿಡ್ಕೆಯಲ್ಲಿ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯಿದ್ದರೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಲ್ವಾಪುರದಲ್ಲಿ ಮಸೂದ್ ಅಜರ್ ನಡೆಸುತ್ತಿರುವ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಇದೆ. ಈ ಎರಡು ನೆಲೆಗಳನ್ನು ಭಾರತ ಉಡೀಸ್ ಮಾಡಿದೆ. 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಯಾವ್ಯಾವ ಸ್ಥಳಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿಲ್ಲ. ಆದರೆ, ಪಾಕಿಸ್ತಾನ ಎಲ್ಲೆಲ್ಲಿ ದಾಳಿ ನಡೆದಿದೆ ಎಂದು ಹೇಳಿದೆ. ಪ್ರಧಾನಿ ಮೋದಿ ಸಭೆ ಮೇಲೆ ಸಭೆ ನಡೆಸಿದ್ದರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜನರು ಬಯಸಿದ ರೀತಿಯಲ್ಲೇ ಪ್ರತೀಕಾರ ಎಂದಿದ್ದರು. ಇದರ ಬೆನ್ನಲ್ಲೇ ಆಪರೇಷನ್ ಸಿಂಧೂರ ಮೂಲಕ ಭಾರತ ದಾಳಿ ನಡೆಸಿದೆ.
ಪ್ರತೀಕಾರ ತೀರಿಸಿಕೊಳ್ತೀವಿ ಎಂದ ಪಾಕಿಸ್ತಾನ
ಭಾರತದ ಏರ್‌ಸ್ಟ್ರೈಕ್ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಪಾಕಿಸ್ತಾನದ ಐಎಸ್‌ಪಿಆರ್‌ನ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಭಾರತದ ದಾಳಿಯನ್ನು ದೃಢಪಡಿಸಿದ್ದು, ಭಾರತವು ಕೋಟ್ಲಿ, ಮುರಿಡ್ಕೆ, ಬಹವಾಲ್ಪುರ್ ಮತ್ತು ಮುಜಫರಾಬಾದ್‌ಗಳಲ್ಲಿ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತ ನಿಖರವಾದ ಮಿಲಿಟರಿ ದಾಳಿಗಳನ್ನು ನಡೆಸಿದೆ ಎಂದು ದೃಢಪಡಿಸಿದ್ದು, ಭಾರತದ ದಾಳಿಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಎಲ್ಲ ಹಕ್ಕಿದೆ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವಾಲಯದ ಪ್ರಕಾರ, "ಆಪರೇಷನ್ ಸಿಂಧೂರ್ ಗಮನ ಕೇಂದ್ರೀಕರಿಸಿದ್ದು, ಸೀಮಿತವಾಗಿತ್ತು ಮತ್ತು ಇದರ ವ್ಯಾಪ್ತಿ ಹಾಗೂ ಪರಿಣಾಮ ಹೆಚ್ಚಾಗದಂತೆ ನೋಡಿಕೊಳ್ಳಲಾಗಿತ್ತು". ಯಾವುದೇ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೂ ಹಾನಿ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು.
ಭಾರತದ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕರ ನಿಖರವಾದ ಸ್ಥಳವನ್ನು ತಿಳಿಸಿದ್ದವು. ಭಾರತೀಯ ಪಡೆಗಳು ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ನಾಯಕರನ್ನು ಗುರಿಯಾಗಿಸಲು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಈ ಸಂಘಟನೆಗಳು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ಲಾನ್ ಮಾಡಿದ್ದವು. ಮೂರು ಪಡೆಗಳು - ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ - ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ವಿಶೇಷ ನಿಖರ ಮದ್ದು ಗುಂಡುಗಳನ್ನು ಬಳಸಿ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ಮಾಡಲಾಯಿತು. ಭಾರತೀಯ ಪಡೆಗಳು ಯಶಸ್ವಿಯಾಗಿ ಒಂಬತ್ತು ಉಗ್ರನೆಲೆಗಳನ್ನು ನಾಶ ಮಾಡಿದ್ದು, ಅದರಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದ್ದವು.
ಪಾಕಿಸ್ತಾನದಲ್ಲಿನ ಬಹವಾಲ್ಪುರ್, ಮುರಿದ್ಕೆ ಮತ್ತು ಸಿಯಾಲ್ಕೋಟ್‌ನಲ್ಲಿನ ಟಾರ್ಗೆಟ್ ನಾಶಪಡಿಸಲಾಯಿತು. ಈ ಕಾರ್ಯಾಚರಣೆಯು ಜೈಶ್-ಎ-ಮೊಹಮ್ಮದ್ ನ ಪ್ರಧಾನ ಕಛೇರಿಯಾದ ಬಹವಾಲ್ಪುರ್ ಮತ್ತು LeT ನ ಪ್ರಧಾನ ಕಛೇರಿಯಾದ ಮುರಿದ್ಕೆ ಮೇಲೆ ಕೇಂದ್ರೀಕರಿಸಿತ್ತು. ಮಸೂದ್ ಅಜರ್ 1999 ರಲ್ಲಿ ಬಿಡುಗಡೆಯಾದಾಗಿನಿಂದ ಬಹವಾಲ್ಪುರ್ ಜೈಶ್ ಎ ಮೊಹಮ್ಮದ್ ನ ತಳಹದಿಯಾಗಿದೆ. JeM ಭಾರತದಲ್ಲಿ ಪುಲ್ವಾಮಾ ಮತ್ತು ಸಂಸತ್ತಿನ ಮೇಲಿನ ದಾಳಿ ಸೇರಿದಂತೆ ಹಲವು ಪ್ರಮುಖ ದಾಳಿಗಳನ್ನು ಮಾಡಿದೆ. ಮುರಿದ್ಕೆಯಿಂದ ಕಾರ್ಯನಿರ್ವಹಿಸುತ್ತಿರುವ ಹಫೀಜ್ ಸಯೀದ್ ನೇತೃತ್ವದ ಲಷ್ಕರ್ ಎ ತೊಯ್ಬಾ ( LeT) 2008 ರ ಮುಂಬೈ ದಾಳಿಯನ್ನು ಸಂಘಟಿಸಿತ್ತು.
ರಕ್ಷಣಾ ಸಚಿವಾಲಯವು ಮಧ್ಯರಾತ್ರಿ 1:44 ಗೆ ನೀಡಿದ ಹೇಳಿಕೆಯಲ್ಲಿ, ಈ ಕಾರ್ಯಾಚರಣೆಯನ್ನು "ಗಮನ ಕೇಂದ್ರೀಕರಿಸಿದ್ದು, ಸೀಮಿತ ಮತ್ತು ಉಲ್ಬಣಗೊಳ್ಳದಂತೆ ನೋಡಿಕೊಳ್ಳಲಾಗಿತ್ತು" ಎಂದು ವಿವರಿಸಿದೆ. ಪಿಟಿಐ ವರದಿ ಪ್ರಕಾರ, ಬಹವಾಲ್ಪುರ್‌ನಲ್ಲಿರುವ ಜೈಷ್‌ಎ ಮೊಹಮ್ಮದ್ ನ ಪ್ರಧಾನ ಕಛೇರಿ ಮತ್ತು ಮುರಿದ್ಕೆಯಲ್ಲಿರುವ ಲಷ್ಕರ್ ಎ ತೊಯ್ಬಾ ನ ನೆಲೆಯನ್ನು ಗುರಿಯಾಗಿಸಲಾಯಿತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಯಿತು.
#parliament #constitution #prime #minister #Lokasabe #rajyasabha #president #Sanskrit #Modi #Muniswamy #gowda #ಚೇತನಾ #Central #government #yogi #riya #cabinet #ಇಂದ್ರಪ್ರಸ್ಥ #ಭಾರತ #ದೇಶ #NewDelhi #AI
https://www.instagram.com/reel/DJVW1YzziJm/?igsh=MXJmMWFkdm4zcWNseQ==
-
LIVE
Badlands Media
6 hours agoBadlands Daily: September 19, 2025
2,207 watching -
35:08
Colion Noir
18 hours agoA Bear, an AR-15, and a Home Invasion
51.5K7 -
LIVE
Wendy Bell Radio
5 hours agoConsequence Culture
6,905 watching -
Crypto Power Hour
1 hour agoSelf-Custody vs Centralized Crypto Card
3.78K7 -
LIVE
LFA TV
11 hours agoBREAKING NEWS ON LFA TV! | FRIDAY 9/19/25
3,749 watching -
45:45
JULIE GREEN MINISTRIES
3 hours agoWHAT WILL HAPPEN ON SEPTEMBER 23RD PT.1
66.5K278 -
1:54:07
The Chris Salcedo Show
12 hours ago $3.19 earnedGOP Shields Violent Left From Consequences For Their Actions
22.9K5 -
DVR
Welcome to the Rebellion Podcast
13 hours ago $0.69 earnedDisney Star Tells People to Cancel Disney - WTTR Podcast Live 9/19
13.6K1 -
2:18:05
Game On!
21 hours ago $1.61 earnedHappy FOOTBALL FRIDAY! Week 3 NFL Betting Preview!
37.4K2 -
15:10
Michael Button
16 hours ago $3.18 earnedGroundbreaking Discovery at Giza Pyramids?
57.6K11