sripadaraja

3 months ago
16

*ಶ್ರೀ ಶ್ರೀಪಾದರಾಜರ ಮಧ್ಯಾರಾಧನೆ ಅಲಂಕಾರ ಹಾಗೂ ಮಂಗಳಾರತಿ (ಮುಳಬಾಗಿಲು)*

#ಪಾದರಾಜ #ಪಂಚರತ್ನಮಾಲಿಕ #Sri #Sripadaraja #Pancharatnamaalika
#mantra #hinduism #sanatanadharma #viralvideo #viral #ಕೀರ್ತನಕಾರರ #ಕಿರುಪರಿಚಯ #ಕನ್ನಡವ್ಯಾಕರಣ #SriPadharajaMutt #SanyasaSweekara #Peetarohana #Teertha #Mulbagal.

ಮುಳಬಾಗಿಲು ಶ್ರೀ ಪಾದರಾಜ ಮಠ ಆರಾಧನಾ ಮಹೋತ್ಸವ ಶ್ರೀ ಶ್ರೀಪಾದರಾಜರ ಮಠ, ಮುಳಬಾಗಿಲು
ಮುಳಬಾಗಿಲು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ ದರುಶನ ಪಡೆಯಲೆಂದು ಬರುವ ಅನೇಕ ಭಕ್ತರ ಪಾಲಿಗೆ ಈ ಸನ್ನಿಧಾನದ ಪ್ರಶಾಂತ ವಾತಾವರಣವು ಶಾಂತಿ ಮತ್ತು ಸಂತೃಪ್ತಿಯ ಚಿಲುಮೆಯಾಗಿದೆ.

ಶ್ರೀಪಾದರಾಜರು ಇಳಿವಯಸ್ಸಿನಲ್ಲಿದ್ದಾಗಲೊಮ್ಮೆ ಅವರಿಗೆ ಗಂಗಾಸ್ನಾನದ ಬಯಕೆಯಾಯಿತು. ಆದರೆ ಅಷ್ಟು ದೂರ ಪ್ರಯಾಣಿಸುವಷ್ಟು ಸುಸ್ಥಿರ ದೇಹಸ್ಥಿತಿಯಲ್ಲಿ ಅವರಿರಲಿಲ್ಲ. ಆಗ ಸ್ವತಃ ಗಂಗೆಯೇ ಅವರಿಗೆ ಕಾಣಿಸಿಕೊಂಡು, ತಾನೇ ನರಸಿಂಹ ತೀರ್ಥಕ್ಕೆ ಬರುವುದಾಗಿ ವಾಗ್ದಾನವಿತ್ತಳು. ಅಂದಿನಿಂದ ಇಂದಿನವರೆಗೆ, ನರಸಿಂಹ ತೀರ್ಥದಲ್ಲಿ ಸ್ನಾನ ಮಾಡುವುದು ಗಂಗಾಸ್ನಾನಕ್ಕೆ ಸಮ ಎಂದು ಪರಿಗಣಿಸುವ ಪರಿಪಾಠ ಬೆಳೆದುಬಂದಿದೆ.

ಶ್ರೀಪಾದರಾಜರು ತಮ್ಮ ಮಹಾನ್‌ ಕೃತಿಗಳು, ಕೀರ್ತನೆಗಳು, ಸುಳಾದಿಗಳು, ದಂಡಕಗಳು ಮತ್ತು ಇತರ ಕನ್ನಡ ಗ್ರಂಥಗಳಿಂದಾಗಿ ಹರಿದಾಸ ವಿದ್ಯಾ ಭಂಡಾರದ ಪಿತಾಮಹರೆಂದೇ ಪ್ರಖ್ಯಾತರಾದರು. ಆದ್ದರಿಂದಲೇ ಅವರ ಕಾಲವನ್ನು ಭಾರತೀಯ ಜ್ಞಾನ ಪರಂಪರೆಯ ಸುವರ್ಣಯುಗವೆಂದು ಕರೆಯುತ್ತಾರೆ.

ಶ್ರೀಪಾದರಾಜರು ವೃಂದಾವನ ಪ್ರವೇಶಿಸಿದ್ದು ಕ್ರಿ.ಶ.1504ರಲ್ಲಿ. ಇಂದಿಗೂ ಭಕ್ತರು ಮನಃಪೂರ್ವಕವಾಗಿ ಅವರ ವೃಂದಾವನಕ್ಕೆ ಸೇವೆ ಸಲ್ಲಿಸುತ್ತಾರೆ

https://youtube.com/shorts/pV7uWdPPKiA?si=vqrs_bOzlmPEMKAw

Loading 1 comment...