Premium Only Content

sri vysaraya
_ಕರೆತಾರೆಲೆ ರಂಗನ ಶ್ರೀಹರಿಯ ಎಂದವರು ಶ್ರೀ ವ್ಯಾಸರಾಯರು
#ಏಸೇಸು #ಜನುಮ #ಸೂಸಿ #ಶ್ರೀಹರಿಭಕ್ತರ #ಸಂಗ #ಸುಳಾದಿ #ವೇಣುಗೋಪಾಲ
ದಾಸರೆಂದರೆ ಪುರಂದರ ದಾಸರಯ್ಯ! ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ದಾಸರೆಂದರೆ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು ದಾಸನೆಂದು ತುಳಸೀಮಾಲೆ ಧರಿಸಿ ಬೇಸರಿಲ್ಲದೆ ಅವರ ಕಾಡಿಬೇಡಿ ಬಳಲಿಸುತ ಕಾಸು ಗಳಿಸುವ ಪುರುಷ ಹರಿದಾಸನೇ.
#||ದಾಸರೆಂದರೆ|| #ದಾಸಸಾಹಿತ್ಯ #ಪ್ರಕಾರ #ವ್ಯಾಸರಾಯ #ಯತಿರಾಜ
ಇವರ ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು
ತಾಯಿಯ ಹೆಸರು ಸೀತಾಬಾಯಿ.
ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ.
ಶ್ರಿಯುತರು ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ದಾಖಲೆಗಳಿಂದ ತಿಳಿದುಬರುತ್ತದೆ.
ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು.
ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು.
ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಪರಮ ಗುರುಗಳಾಗಿ ಸ್ವೀಕರಿಸಿದ್ದನೆಂದು ಶಾಸನಗಳಿಂದ ತಿಳಿದುಬಂದಿದೆ.
ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ. ಇದು ಬಹು ಪ್ರಸಿದ್ಧ ವಾಗಿದೆ.
ಕೃತಿಗಳು:-
ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಮಾತ್ರ ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ.
ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. ಹರಿಸರ್ವೋತ್ತಮ ವಾಯು ಜೀವೋತ್ತಮ ಇವರ ಜನಪ್ರಿಯ ವಾಕ್ಯ
ಇವರ ಪ್ರಮುಖ ಕಿರ್ತನೆಗಳು:-
ಚಂದ್ರಿಕಾಚಾರ್ಯರ ಪಾದ ದ್ವಯಕೆ/
ಎರುಗುವೆ ಪ್ರತಿವಾಸರಕೆ /ಪ/
ನವ ವೃಂದಾವನ ಮಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ/
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ/
ನಂಬಿದ ಭಕ್ತರ ದೋಷಗಳೆಣಿಸದೆ ಸುಂದರ ರಘುಪತಿ ರಾಮನ ತೋರಿದ /೧/
ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ/
ವಿಜಿಯಿಸಿ ಸ್ಥಾಪಿಸಿ ಮಧ್ವಮತದ ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ ಮಹಿಮೆಯ ಇಳೆಯೊಳು ಸಾಧಿಸಿ ತೋರಿದ /೨/
ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ/
ಮಂತ್ರಾಕ್ಷತೆಯ ಮಹಿಮೆಯ ತೋರಿದ ಚಿತ್ತದಲಿಟ್ಟು ಚಂದ್ರಿಕಾ ರಚಿಸಿ/
ಪಂಚಮುಖದ ಪ್ರಾಣೇಶ ವಿಠ್ಠಲ ಪಂಚಮಂತ್ರದಿಂದ ಪೂಜಿಸಿ ಯತಿಸಿದ /೩/
ಚಿತ್ತೈಸಿದ ವ್ಯಾಸರಾಯ
ರಾಗ ಭೈರವಿ. ಅಟ ತಾಳ ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ ||ಪ|| ನಿತ್ಯ ಮುತ್ತೈದೆಯರೆಲ್ಲ ಎತ್ತೆ ರತುನದಾರತಿಯ ||ಅ.ಪ|| ಹೇಮ ಮಯವಾದ ದಿವ್ಯ ವ್ಯೋಮಯಾನವನ್ನೆ ಏರಿ ಸ್ವಾಮಿ ವ್ಯಾಸರಾಯ ಪೊರಟ ಪ್ರೇಮದಿ ಹರಿಪುರಕೆ ಹಾಟಕದ ಬೆತ್ತಕೋಟಿ ಸಾಟಿ ಇಲ್ಲದೆ ಪಿಡಿದು ನೀಟಾದ ಓಲಗದವರ ಕೂಟಗಳ ಮಧ್ಯದಲ್ಲಿ ಸಾಧು ವಿಪ್ರ ಜನರೆಲ್ಲ ವೇದ ಘೋಷಣೆಯ ಮಾಡೆ ನಾದವುಳ್ಳ ನಗಾರಿಯು ಭೇದಿಸಿತು ನಾಲ್ಕು ದಿಕ್ಕು ಹೇಮಮಯ ಪಿಡಿಯುಳ್ಳ ಚಾಮರಂಗಳನ್ನೆ ಪಿಡಿದು ಕಾಮಿನಿಮಣಿಯರ್ಕೆಲದಿ ಸ್ವಾಮಿಯೆಂದು ಬೀಸುತ್ತಿರೆ ಅರವಿಂದಾಸನನಯ್ಯ ಪುರಂದರವಿಠಲನು ಸಿರಿ ಸಹಿತದಿ ಬಂದು ಕರ ಪಿಡಿದೆತ್ತಿದ್ದು ಕಂಡೆ.
ಉಗಾಭೋಗಗಳು
೧
ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೇ
ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೇ
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೇ
ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ
ಪತಿತಪಾವನನೆಂದರೆ ಸಾಲದೇ
ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ
ಸಂತತ ನೆನೆವರ ಸಲಹುವ ಸಿರಿಕೃಷ್ಣ
೨
ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು
ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ
ನಿನ್ನ ಓಲೈಸಲೇಕೋ ಕೃಷ್ಣ
ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು
ನಿನ್ನ ಓಲೈಸಲೇಕೋ ಕೃಷ್ಣ
ದಿನಕರನುದಿಸಿ ಕತ್ತಲು ಪೋಗದಿದ್ದರೆ
ಹಗಲೇನೋ ಇರುಳೇನೂ ಕುರುಡಗೆ ಸಿರಿಕೃಷ್ಣ
#Asia #india #America #europ #russia #sea #nation #war #hungry #temperature #isro #stock #crypto #currency #airport #ಪ no #agreement #Chethana #africa #Muniswamy #gowda #Riya #YOGI #AI forien #world #development #Australia
-
2:38:56
FreshandFit
15 hours agoShe Left Her Man To Find A HVM In Miami w/ 6IX9INE
365K150 -
11:16
Blackstone Griddles
13 hours agoDouble Roasted Green Chile Smash Burger on the Blackstone Griddle
7.13K2 -
14:36
Tactical Advisor
17 hours agoNew Military Thermal Target
12.7K2 -
2:10
OfficialJadenWilliams
17 hours agoHow we treated AI in 2023 vs 2025
6.98K4 -
9:02
The Shannon Joy Show
17 hours agoWhy is Canada PERSECUTING Dr. Makis
11.7K6 -
57:03
NAG Podcast
13 hours agoAlex Stein: BOLDTALK W/Angela Belcamino
7.05K1 -
8:41
Freedom Frontline
17 hours agoMaria Bartiromo Plays The Clip That ENDS Adam Schiff’s Career
12.2K7 -
9:39
Nate The Lawyer
1 day ago $2.45 earnedBlack Family Turns On BLM Narrative Says Cop Was Justified.
12.1K21 -
32:41
Actual Justice Warrior
2 days agoFinance Girl Goes FULL PROPAGANDIST
14.2K7 -
12:21
itsSeanDaniel
1 day agoAOC and Bernie MELTDOWN after CNN Host CALLS THEM OUT
9.98K9