Premium Only Content
jai sri ram
ಮುಗ್ದ ಮಗುವಿಗೆ ಇಷ್ಟವಾಯಿತು, ಶ್ರೀ ಕೃಷ್ಣನ ನಾಮ0
*ಹರಿದಾಸರ ಲಕ್ಷಣ*
ಪ್ರಯತ್ನವಂತರಾಗಿ ದೈವಬಲ ಪಡೆಯೋಣ*
#child #children #kids #baby #love #family #kid #childhood #photography
*ಹರಿದಾಸರ ಲಕ್ಷಣ ಇರಬೇಕು ಈ ಪರಿ*
*ಗರುವ ಕೋಪ ಮದ ಮತ್ಸರಾದಿ ಬಿಡಬೇಕು*
*ಮರುತಮತಕೆ ಎಲ್ಲಿ ಸರಿಗಾಣೆನೆನುತಲಿ*
*ಧರಿಯೊಳು ಕೂಗಿ ಡಂಗುರವ ಹೊಯಲಿಬೇಕು*
*ಎರಡಾರು ಪುಂಡ್ರವ ವಿರಚಿಸಿ ಪಂಚಮುದ್ರಾ-*
*ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ*
*ಶಿರಿ ಬೊಮ್ಮ ಹರಾದ್ಯರಿಗೆ ತಾರತಮ್ಯ ಭಾವದಿಂದ*
*ಎರಗಿ ಎನ್ನೊಳಗಿದ್ದು ಪೊರಿಯಂದಾಡಲಿಬೇಕು*
*ಕರಣ - ನಯನ - ಶ್ರವಣ - ಚರಣ - ನಾಸ - ವದನ*
*ಪರಿಪರಿ ಅಂಗಗಳು ಹರಿವಿತ್ತವೆನ್ನಬೇಕು*
*ಗುರುಹಿರಿಯರಿಗೆ ಆದರ ಪೂರ್ವಕದಿಂದ*
*ಕರವ ಮುಗಿದು ನಮಸ್ಕರಿಸಿ ನುತಿಸಬೇಕು*
*ನೆರೆಹೊರೆಯವರಿಗೆ ನಿರುತ ಇದ್ದರು ಬೇ -*
*ಸರಗೊಳಿಸದೆ ಸಂಚರಿಸುತ್ತಲಿರಬೇಕು*
*ಹರಣ ಹರಿಯಾಧೀನ, ನೆರೆದ ಸತಿ - ಸುತರು*
*ನಿರುತ ಹರಿಗೆ ದಾಸರು ಎಂದು ಗುಣಿಸಬೇಕು*
*ಪರಮಭಕುತಿ - ಜ್ಞಾನ - ವಿರಕುತಿ ಮಾರ್ಗವು*
*ದೊರಕುವುದಕ್ಕೆ ಸಜ್ಜನರ ಸಂಗವಾಗಬೇಕು*
*ಹರಿವಾಸರ - ಹರಿಚರಿತೆ - ಹರಿಶ್ರವಣ - ಹರಿಪೂಜೆ*
*ಹರಿಸ್ಮರಣ, ಅಂತರಶುಚಿ ಇರಲಿಬೇಕು*
*ಪರಿಪರದೇವತಿ ವಿಜಯವಿಟ್ಠಲಗತೀ*
*ಸುರರಾದ್ಯರಿಗೆಂದು ಉರವಣಿಸಿ ನುಡಿಬೇಕು ll - ಶ್ರೀವಿಜಯದಾಸರು*
ದಾಸರೇ ಹೇಳಿದ ಫಲಸ್ತುತಿ. ಇಹಪರಂಗಳಲ್ಲಿ ಸುಖ ಜೀವನಕ್ಕೆ ಇದು ಆವಶ್ಯಕ.
*ಈ ಪರಿ ಇದ್ದವಂಗೆ ಅನಂತ ಜನುಮಕ್ಕೆ l*
*ತಾಪತ್ರಯಗಳಿಲ್ಲ ವಿಜಯವಿಟ್ಠಲ ಬಲ್ಲ ll - ಶ್ರೀವಿಜಯದಾಸರು*
ದಾಸರು ನಿರೂಪಿಸಿದ ಈ ಲಕ್ಷಣಗಳ ಅನುಕರಣೆ ಉನ್ನತಿಗೆ ಕಾರಣ.
*ಜ್ಞಾನಿಯಾಗಿರಬೇಕು ಅಜ್ಞಾನ ನೀಗಬೇಕು l
*ಕಾಯ್ವುದು ಹರಿನಾಮ*
ಸಂಪೂರ್ಣ ಹರಿದಾಸ ಸಾಹಿತ್ಯದ ತಿರುಳು ಇರುವುದು ಹರಿನಾಮ ಸ್ಮರಣೆಯಲ್ಲಿ.
*ನಾಮವೆ ಕಾಯುವುದು ನಾಮವೆ ಉಳಿಪುದು*
*ನಾಮವೆ ಸರ್ವಪವಿತ್ರ ಮಾಡುವುದು*
*ನಾಮವೆ ಘನ ದುರಿತ ಸಂಹಾರ ಮಾಡುವುದು*
*ನಾಮವೆ ನೆನವಂಗೆ ವಜ್ರಾಂಗಿಯಪ್ಪುದು*
*ನಾಮವೆ ಸಕಲ ಭಕ್ತ ಸ್ತೋಮವ ಪಾಲಿಸಿತು*
*ನಾಮವೆ ನಿಂದಲ್ಲಿ ಕುಳಿತಲ್ಲಿ ಮಹಾಭಾಗ್ಯ*
*ನಾಮವೊಂದು ನೆನೆಯೆ ವಿಜಯವಿಠಲನ*
*ಧಾಮವೆ ಆಗುವುದು ತಡೆಯದೆ ನಮಗೆಲ್ಲ ll - ಶ್ರೀವಿಜಯದಾಸರು*
*ಮತಿವಂತರ ಪ್ರಿಯ ವಿಜಯವಿಠಲನ್ನ*
*ಕಥನ ನಾಮಾಮೃತಕೆ ಪ್ರತಿ ಗಾಣೆ ಕಲಿಯುಗದಿ ll*
*ಧ್ಯಾನ ದಾನ ಕರ್ಮ ಏನೇನು ಮಾಡಲು*
*ಊನವಲ್ಲದೆ ಸಂಪೂರ್ಣವಾಗದು ಕಾಣೋ*
*ಕ್ಷೋಣಿಯೊಳಗೆ ಸಮಾನವಿಲ್ಲದ ನಾಮ*
*ದೀನನಾಗಿ ನಿಂದು ದಿನಕ್ಕೊಮ್ಮೆ ನೆನೆದಡೆ*
*ಧ್ಯಾನದಾನ ಕರ್ಮ ಆವಾದ ಕಾಲಕ್ಕೆ*
*ತಾನೆಸಗಿದ ಫಲಕೆ ನೂರುಮಡಿ ಉಂಟು*
*ದಾನವಾಂತಕ ರಂಗ ವಿಜಯವಿಠಲನ್ನ*
*ಚೂಣಿಗೆ ನೆನಸಲು ಮಾಣದಲೆ ಗತಿ ll - ಶ್ರೀವಿಜಯದಾಸರು*
#parenting #cute #happy #instagood #instagram #education #smile #fun #girl #photooftheday #art #mother #parents #life #boy #toddler #babyboy #babygirl #portrait #mom #school
*ನಾಮವೆ ಸಕಲ ಸಾಧನಕ್ಕೆ ಬಲು ಸಾಧನ l*
*ನೀ ಮರೆಯದಿರು ವಿಜಯವಿಠಲನ್ನ ll - ಶ್ರೀವಿಜಯದಾಸರು*
ರಾಗ - : ತಾಳ -
ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ
ಬಂದೆನ್ನ ಕಾಯೊ ಶ್ರೀ ವೆಂಕಟರಮಣಾ ll ಪ ll
ಪಟ್ಟೆ ಪೀತಾಂಬರ ತೊಟ್ಟ ಮುತ್ತಿನ ಹಾರಾ
ಕಟ್ಟಿದ ವೈಜಯಂತಿ ತುಳಸಿಯ ಮಾಲಾ
ಸುಂದರ ವದನ ಶುಭಾಂಗ ಮನೋಹರಾ
ಮಕರ ಕುಂಡಲಧರ ಮೋಹನ ರೂಪಾ ll 1 ll
ನಿತ್ಯ ತೃಪ್ತ ನೀನೆ ನಿಜ ಗುಣಪರಿಪೂರ್ಣ ನಿತ್ಯ ಕಲ್ಯಾಣನೆ
ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ
ಅನಂತ ರೂಪಾ ಶ್ರೀ ವೆಂಕಟೇಶಾ ll 2 ll
ಪಾವನ ಚರಿತನೇ ಪರಮ ಪವಿತ್ರನೇ
ಪರಮ ಕಲ್ಯಾಣ ಗುಣಾರ್ಣವನೇ
ಗರುಡ ಗಮನನೇ ದುರಿತ ವಿದೂರನೆ
ಪರಮ ದಯಾನಿಧೇ ವರಗಿರಿವಾಸ ll 3 ll
ದೇಶ ದೇಶವ ತಿರುಗಿ ಘಾಸಿ ಗೊಂಡಿಹೆ ಭರದಿ
ಕ್ಲೇಶ ಪಾಶಂಗಳ ಪರಿಹರಿಸಯ್ಯಾ
ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ
ಲೇಸಾದ ಭಕುತಿಯ ನಿತ್ಯ ಪಾಲಿಸು ಪ್ರಭುವೆ ll 4 ll
ಸುರಮುನಿ ವಂದ್ಯನೇ ಸುರನರ ಸೇವ್ಯನೇ
ಶರಣರ ಪಾಲಿಪ ಸರ್ವೋತ್ತಮನೇ
ತಿರುಪತಿವಾಸನೆ ತಿರುಮಲೆ ಶ್ರೀಶನೇ
ಶೇಷಗಿರೀಶನೆ ಶ್ರೀವೆಂಕಟವಿಟ್ಠಲನೇ ll 5 ll
*ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ ಇವ*
*ಶ್ರೋತ್ರಿಯನೆಂದೆನಿಸೋ ಬಲು ಶುಂಠನೆಂದೆನಿಸೋ*
*ಪುತ್ರಮಿತ್ರಾದ್ಯರಿಂ ಬೈಸಿ ಪೂಜೆಯಗೈಸೊ*
*ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕ ದೇವ ll*
*ನಿನ್ನ ಸಂಕಲ್ಪಾನುಸಾರ ಮಾಡೊ*
*ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೆ ll - ಶ್ರೀಜಗನ್ನಾಥದಾಸರು*
ಇದು ಜಗತ್ತಿನ ಸತ್ಯ ಸಂಗತಿ. *'ಸತ್ಯ ಸಂಕಲ್ಪತೋ ವಿಷ್ಣುಹು....'* ಎಂದಂತಿರುವುದು ಸತ್ಯ.
ಶ್ರೀಪುರಂದರರು -
*ಹರಿಚಿತ್ತ ಸತ್ಯ ಹರಿ ಚಿತ್ತ l*
*ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು ll*
ಭಗವಂತನ ಮಹಾತ್ಮ್ಯಜ್ಞಾನ ಪಡೆದು ಭಕ್ತಿ ಮಾಡುವುದು ಜೀವನ ಹೊಣೆಯಾಗಿದೆ. ಮಿಕ್ಕದ್ದನ್ನು ಕೊಡುವುದು ಶ್ರೀಹರಿಯ ಇಚ್ಛೆಯಾಗಿದೆ. ಆದರೆ ಭಗವಂತ ನೀಡಿದ ಭರವಸೆ *'...... ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್'* ಭಾಗವತರ ಯೋಗಕ್ಷೇಮವನ್ನು ನಾನೇ ವಹಿಸುತ್ತೇನೆ ಎಂದು. ಅದಕ್ಕೆ ದಾಸರೆಂದ ಮಾತು ಹೀಗಿದೆ -
*ಗುಣಕಾಲಕರ್ಮಸ್ವಭಾವಂಗಳ*
*ಅನುಸರಿಸಿ ಪುಣ್ಯಪಾಪಗಳ ಮಾಡಿಸಿ ಫಲಗ-*
*ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು ll*
ಇದನ್ನು ತಿಳಿಯದೆ ಮೈಮರೆತು ಇರುವವನನ್ನು ಮೂರ್ಖ (ನೀಚ) ಎಂದರು.
*ಕರಣಜನ್ಯ ಪುಣ್ಯ ಪಾಪವೆರಡು ಹರಿಯಾಧೀನವೆಂದು l*
*ಸ್ಮರಿಸಿತಿರಲತಿ ಭಕುತಿಯಿಂದ ಹರುಷ ಬಡದಲಿಪ್ಪ ಮನುಜ l*
*ನೀಚನಲ್ಲವೆ ಎಂದ ಮಾತು ನೆನಪಿನಲ್ಲಿಡೋಣ.*
ಶ್ರೀಜಗನ್ನಾಥದಾಸರ ಅಂತರಾಳದಿಂದ ಬಂದ ಮಾತು ಹೀಗಿದೆ - ನಿನ್ನ ಚಿತ್ತಕ್ಕೆ ಬಂದಂತೆ ಮಾಡೋ ಎನ್ನುವರು.
*ನಿನ್ನ ಸಂಕಲ್ಪವಲ್ಲದೆ ಇನ್ನು ಅನ್ಯಥಾವಾಗ ಬಲ್ಲದೆ ಹೀಂಗೆ*
*ಚನ್ನಾಗಿ ನಾ ತಿಳಿಯದೆ ಮಂದ ಮಾನವನಾಗಿ ಬಾಳಿದೆ ...ll - ಶ್ರೀಜಗನ್ನಾಥದಾಸರು*
ಸಕಲ ಚರಾಚರ ಪ್ರಪಂಚಕ್ಕೆ ಒಡೆಯನಾದ ಶ್ರೀಹರಿ *'ಕರ್ತುಂ ಅಕರ್ತುಂ ಅನ್ಯಥಾ ಕರ್ತುರ್ಮಪಿ ಸಮರ್ಥಹ'* ಆದ್ದರಿಂದ ಸರ್ವವೂ ಅವನ ವಶದಲ್ಲಿದ್ದು ಅವನ ಸಂಕಲ್ಪಾನುಸಾರ ನಡೆಯುತ್ತದೆ.
ಈ ಜಗತ್ತಿನಲ್ಲಿ ಯಾವಾಗಲೂ ಎರಡು ವಾದಗಳು ಇದ್ದೇ ಇವೆ.
ಒಂದು ದೈನಂದಿನ ಕೆಲಸ ಮೊದಲ್ಗೊಂಡು ಎಲ್ಲಾ ಮಹತ್ವದ ಕಾರ್ಯಗಳು ದೈವಾಧೀನವೆಂದು ಜರಿದು ದೈವದ ಮೇಲೆ ಭಾರಹಾಕುವರು.
ಎರಡು ಎಲ್ಲವೂ ನನ್ನ ಪ್ರಯತ್ನದಿಂದಾಗಿ ಆಗುವುದು ಇದರಲ್ಲಿ ದೈವದ ಪಾತ್ರವೇನೂ ಇಲ್ಲ ಎನ್ನುತ್ತಾ ಬದುಕುವರು.
ವಿವೇಕವುಳ್ಳವನು ವಾಹನಕ್ಕೆ ( ದ್ವಿಚಕ್ರ ವಾಹನ) ಎರಡು ಚಕ್ರಗಳಿರುವಂತೆ ಪೌರುಷ ಹಾಗೂ ದೈವ ಎರಡೂ ಬೇಕು ಎಂದು ಅರಿತಿರುತ್ತಾನೆ.
ಇದೇ ವಿಷಯ ಕ್ಕೆ ಸಂಬಂಧಿಸಿದ ಕವಿಯ ಜಾಣ್ಣುಡಿಯೊಂದು :-
ರತ್ನೈರ್ಮಹಾರ್ಹೈಸ್ತುತುಷುರ್ನದೇವಾಃ
ನ ಭೇಜಿರೆ ಭೀಮವಿಷೇಣ ಭೀತಿಂ|
ಸುಧಾಂ ವಿನಾ ನ ಪ್ರಯಯುರ್ವಿರಾಮಂ
ನ ನಿಶ್ಚಿತಾರ್ಥಾತ್ ವಿರಮಂತಿ ಧೀರಾಃ||
ದೇವತೆಗಳು ಅಮೃತ ಪಡೆಯುವ ಉದ್ದೇಶದಿಂದ ಕ್ಷೀರಸಾಗರ ದ ಮಥನಕ್ಕೆ ತೊಡುಗುತ್ತಾರೆ. ಪ್ರಥಮಗ್ರಾಸೇ
ಮಕ್ಷಿಕಾ ಪಾತಃ ( ಮೊದಲ ತುತ್ತಿಗೆ ನೊಣ) ಎಂಬಂತೆ ಭಯಾನಕವಾದ ಹಾಲಾಹಲವು ಉದ್ಭವಿಸಿತು.ಅದರಿಂದ ಕಂಗೆಡದೆ ಮತ್ತೆ ಮಥನವನ್ನು ಮುಂದೆವರಿಸಿದರು.
ಅಮೂಲ್ಯವಾದ ರತ್ನಗಳು ಹಾಗೂ ಮನಮೋಹಕ ಅಪ್ಸರೆಯರು ಬಂದರು.ಆದರೂ ಯಾವುದಕ್ಕೂ ಜಗ್ಗದೇ ಬಗ್ಗದೇ ,ತಮ್ಮ ಗುರಿ ಅಮೃತವಾದದ್ದರಿಂದ ಅದು ದೊರೆಯುವವರೆಗೂ ಪ್ರಯತ್ನ ಮಾಡುತ್ತಲೇ ಇದ್ದರೂ ಅದರ ಫಲವಾಗಿ ಸುಧೆಯನ್ನು ಪಡೆದರು. ನಿಶ್ಚಿತವಾದ ಗುರಿ ಮತ್ತು ಪ್ರಯತ್ನವು ದೇವತೆಗಳಲ್ಲಿ ಕಂಡು ಬರುತ್ತದೆ.
ಇದರಂತೆ ಇರುವ ಮತ್ತೊಂದು ಪ್ರಸಂಗವು :-
ಯುಧಿಷ್ಠಿರನು ತಂದೆಯಾದ ಪಾಂಡುರಾಜನಿಗಾಗಿ ರಾಜಸೂಯಯಾಗ ಮಾಡಬೇಕಾಗಿ ಬಂದು ಅದರ ಸಾಧ್ಯತೆ ಹಾಗೂ ಬಾಧ್ಯತೆ ಗಳ ಬಗ್ಗೆ ಕೃಷ್ಣನಲ್ಲಿ ವಿಚಾರಿಸಿದಾಗ ಶ್ರೀಕೃಷ್ಣನು :- ಓ ಧರ್ಮಜ ! ಮಹಾಬಲಾಢ್ಯನಾದ ಜರಾಸಂಧನು ಬದುಕಿರುವಾಗ ನಿನಗೆ ರಾಜಸೂಯ ಎಂತು ಸಾಧ್ಯವಾದೀತು? ಬಲರಾಮನಿಂದಲೂ ಹತನಾಗದ ಅವನನ್ನು ಯಾರು ತಾನೇ ಜಯಸಿಯಾರು? ಬ್ರಹ್ಮ ಹಾಗೂ ಶಿವನ ವರದಿಂದ ಎಲ್ಲ ಲೋಕಗಳನ್ನು ಗೆಲ್ಲುವ ನು ಅವನು.ಅವನು ಬದುಕಿರುವ ತನಕ ಯಾಗ ನಡೆಯದು ಎಂದು. ಇದಕ್ಕೆ ಅಂಜಿಕೊಂಡು ಯಾಗ ದಿಂದ ಹಿಂದೆ ಸರಿಯುವ ಮನಸ್ಸು ಮಾಡಿದನು ಧರ್ಮರಾಯ.ಆವಾಗ ಭೀಮಸೇನನು :-
*ಪ್ರಯತ್ನಮೇಕಮಗ್ರತೋ ವಿಧಾಯ ಭೂತಿಮಾಪ್ನುಮಃ||*
ಅಣ್ಣ! ಪ್ರಯತ್ನ ಮಾಡದೇ ಯಾವುದೇ ಕೆಲಸ ದಿಂದ ಹಿಂದೆ ಸರೆಯುವುದೆ.ಪ್ರಯತ್ನ ದಿಂದ ಸಾಧ್ಯವಾಗದ್ದು ಇದ್ದೀತೇ.
ಯಾವ ವ್ಯಕ್ತಿಯು ಕಾರ್ಯಸಿದ್ಧಿಗೆ ಬೇಕಾದ ಮಹಾಪ್ರಯತ್ನವನ್ನು ಮಾಡುವುದಿಲ್ಲವೋ ಅವನು ದೇವರ ಅನುಗ್ರಹದಿಂದ ವಂಚಿತನಾಗುತ್ತಾನೆ :-
*ಮಹಾಪ್ರಯತ್ನವರ್ಜಿತಾಃ ಹರೇರನುಗ್ರಹೋಜ್ಝಿತಾಃ ||*
ನಮ್ಮ ಪ್ರಯತ್ನವನ್ನು ಗಮನಿಸಿ ಹರಿಯು ಅನುಗ್ರಹಿಸುತ್ತಾನೆ.
ಹಾಗಾಗಿ ಕೆಲಸ ಪೂರ್ಣವಾಗಲು ಬೇಕಾದ ದೈವಬಲ ಪೌರುಷಗಳೆರಡು ಒಟ್ಟದಾಗ ಫಲವಾಗದೇ ಇರಲು
ಯಾವುದೇ ನೆಪವಿಲ್ಲ.
ಮತ್ತೆ ಮೊದಲಿನ ವಿಷಯ ಕ್ಕೆ ಬಂರುವುದಾದರೆ ಆ ಕ್ಷೀರಸಾಗರ ಮಥನ ದಲ್ಲಿ ದೈತ್ಯರೂ ಭಾಗವಹಿಸಿದ್ದರು ಆದರೂ ಅವರಿಗೆ ಅಮೃತ ಸಿಗಲಿಲ್ಲ. ಕಾರಣ :-
*ಏವಂ ಸುರಾಸುರಗಣಾ ಸಮದೇಶಕಾಲಹೇತ್ವರ್ಥಯೋಗಗತಯೋSಪಿ ಫಲೇ ವಿಕಲ್ಪ್ಯಾಃ|
ತತ್ರಾಮೃತಂ ಸುರಗಣಾ ಫಲಮಂಜಸಾಪುಃ ಯತ್ಪಾದಪಂಕಜರಜಃಶ್ರಯಣಾನ್ನ ದೈತ್ಯಾಃ ||
ಅವರ ಮೇಲೆ ದೈವಾನುಗ್ರಹವಿರಲಿಲ್ಲ.
ನಾವೂ ಕೂಡ ಪ್ರಯತ್ನವಂತರಾಗಿ ದೈವಬಲ ಪಡೆದು ಮನೋರಥಗಳನ್ನು ಪಡೆಯೋಣ.
-
9:28
ThatStarWarsGirl
1 day agoSupergirl Trailer REACTION!
33.5K5 -
LIVE
Lofi Girl
2 years agoSynthwave Radio 🌌 - beats to chill/game to
343 watching -
LIVE
Boxin
3 hours agoBoxin + Moogsical RV There Yet!? Take 2! (special guest?)
126 watching -
28:03
The Hannah Faulkner Show
2 days ago $0.25 earnedCWA Study Finds Shocking Content in Netflix Shows | LIVE WITH HANNAH FAULKNER
2.95K2 -
31:45
The Heidi St. John Podcast
2 days agoFan Mail Friday: Faith, Discernment, and Keeping Christ at the Center
241 -
39:10
The Bryce Eddy Show
2 days ago $0.12 earnedFresh Mouth Club: Exposing the Dental Industry’s Biggest Lie
1591 -
14:55
Nikko Ortiz
1 day agoI Laugh I Go To Hell...
59K11 -
9:36
MattMorseTV
18 hours ago $44.55 earnedTrump’s TOLERANCE has just RUN OUT.
125K159 -
1:39:31
Sam Tripoli
1 day ago $21.06 earnedBroken Sim: Owen Benjamin Was Right + Candace Owens' Background + Idiotic Comedian Rankings
29.9K22 -
7:04:33
MetatronGaming
1 day agoSOMA - FULL GAME - Metatron Plays
18.1K2