Premium Only Content

sri Ramha
*ಶ್ರೀರಾಘವೇಂದ್ರಗುರವೇ ನಮೋ ಅತ್ಯಂತ ದಯಾಲವೇ ।।*
#ragavendra #gururagavendra #rayaru #karnataka
ರಾಘವೇಂದ್ರ ಸ್ವಾಮಿಗಳು (1595–1671), ಜನನ ವೆಂಕಟನಾಥ, ಒಬ್ಬ ಗೌರವಾನ್ವಿತ ಸಂತ, ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞರಾಗಿದ್ದರು, ಅವರು ಮಧ್ವಾಚಾರ್ಯರ ದ್ವೈತ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸಿದರು.
ವಿಷ್ಣುವಿನ ಮೇಲಿನ ಭಕ್ತಿ, ನೈತಿಕ ಜೀವನ ಮತ್ತು ಸಮಾಜಕ್ಕೆ ಸೇವೆಯ ಮೇಲೆ ಕೇಂದ್ರೀಕೃತವಾದ ಅವರ ಬೋಧನೆಗಳಿಗಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ.
#ragavendraswami #mantralayam #mantralaya #gururagavendra #karnataka #ragavendra #rayaru #travelkarnataka #krishna #hanuman #sriram
ಆರಂಭಿಕ ಜೀವನ ಮತ್ತು ಶಿಕ್ಷಣ: ತಮಿಳುನಾಡಿನ ಭುವನಗಿರಿಯಲ್ಲಿ ಕನ್ನಡ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಿಂದಲೇ ಅಸಾಧಾರಣ ಬೌದ್ಧಿಕ ಸಾಮರ್ಥ್ಯಗಳನ್ನು ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಳವಾದ ಆಸಕ್ತಿಯನ್ನು ಪ್ರದರ್ಶಿಸಿದರು.
ಅವರು ತಮ್ಮ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಅಡಿಯಲ್ಲಿ ಸಂಸ್ಕೃತ, ವೈದಿಕ ಗ್ರಂಥಗಳು ಮತ್ತು ದ್ವೈತ ವೇದಾಂತವನ್ನು ಕರಗತ ಮಾಡಿಕೊಂಡರು, ಅಧ್ಯಯನದಲ್ಲಿ ಶ್ರೇಷ್ಠರಾಗಿದ್ದರು.
ಸಂನ್ಯಾಸ ಮತ್ತು ಪಾದ್ರಿ ಪದವಿ: ಅವರು 1621 ರಲ್ಲಿ ಸನ್ಯಾಸ ಜೀವನವನ್ನು ಪ್ರವೇಶಿಸಿದರು, ರಾಘವೇಂದ್ರ ತೀರ್ಥ ಎಂಬ ಹೆಸರನ್ನು ಸ್ವೀಕರಿಸಿದರು ಮತ್ತು ನಂತರ ಅವರ ಗುರುವಿನ ನಂತರ ಕುಂಭಕೋಣಂ ಮಠದ (ನಂತರ ಶ್ರೀ ರಾಘವೇಂದ್ರ ಸ್ವಾಮಿ ಮಠ ಎಂದು ಕರೆಯಲಾಯಿತು) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
#Chetha #Muniswamy #gowda #Riya #YOGI
#ChethanaMuniswamygowda
ಪ್ರವಾಸ ಮತ್ತು ಬೋಧನೆಗಳು: ಅವರು ದಕ್ಷಿಣ ಭಾರತದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದರು, ದ್ವೈತ ತತ್ವಶಾಸ್ತ್ರವನ್ನು ಪ್ರಚಾರ ಮಾಡಿದರು ಮತ್ತು ಆಧ್ಯಾತ್ಮಿಕ ವಿಮೋಚನೆಗಾಗಿ ವಿಷ್ಣುವಿಗೆ ಭಕ್ತಿ (ಭಕ್ತಿ) ಯ ಮಹತ್ವವನ್ನು ಒತ್ತಿ ಹೇಳಿದರು. ಅವರು ಪವಿತ್ರ ಗ್ರಂಥಗಳ ಕುರಿತು ಹಲವಾರು ವ್ಯಾಖ್ಯಾನಗಳನ್ನು ಬರೆದರು, ದ್ವೈತ ತಾತ್ವಿಕ ಪ್ರವಚನವನ್ನು ಶ್ರೀಮಂತಗೊಳಿಸಿದರು.
ಪವಾಡಗಳು ಮತ್ತು ದೈವಿಕ ಉಪಸ್ಥಿತಿ: ಜೀವನವನ್ನು ಪುನಃಸ್ಥಾಪಿಸುವುದು, ಮರಳಿನಿಂದ ನೀರನ್ನು ಸೃಷ್ಟಿಸುವುದು ಮತ್ತು ಅವರ ಭಕ್ತರಿಗೆ ಮಾರ್ಗದರ್ಶನ ನೀಡಲು ಕನಸುಗಳು ಮತ್ತು ದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಸೇರಿದಂತೆ ಅನೇಕ ಪವಾಡಗಳು ರಾಘವೇಂದ್ರ ಸ್ವಾಮಿಗಳಿಗೆ ಸಲ್ಲುತ್ತವೆ.
ಈ ವೃತ್ತಾಂತಗಳು ಅವರ ಕರುಣೆ ಮತ್ತು ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಎತ್ತಿ ತೋರಿಸುತ್ತವೆ.
ಮಂತ್ರಾಲಯದಲ್ಲಿ ಜೀವ ಸಮಾಧಿ: 1671 ರಲ್ಲಿ, ಅವರು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಜೀವ ಸಮಾಧಿ (ಜೀವಂತವಾಗಿರುವಾಗ ಪ್ರಜ್ಞಾಪೂರ್ವಕ ಧ್ಯಾನದ ಸ್ಥಿತಿ) ಪ್ರವೇಶಿಸಿದರು, ಇದು ವಾರ್ಷಿಕವಾಗಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಲೇ ಇದೆ.
ಅವರು 700 ವರ್ಷಗಳ ಕಾಲ ಜೀವ ಸಮಾಧಿಯಲ್ಲಿ ಉಳಿಯುವುದಾಗಿ, ತಮ್ಮ ಭಕ್ತರನ್ನು ಆಶೀರ್ವದಿಸುವುದನ್ನು ಮತ್ತು ಮಾರ್ಗದರ್ಶನ ಮಾಡುವುದನ್ನು ಮುಂದುವರಿಸುವುದಾಗಿ ಪ್ರಸಿದ್ಧವಾಗಿ ಘೋಷಿಸಿದರು.
ಪರಂಪರೆ ಮತ್ತು ಪ್ರಭಾವ: ಭಕ್ತಿ, ಕರುಣೆ, ನಮ್ರತೆ ಮತ್ತು ಒಬ್ಬರ ಧರ್ಮಕ್ಕೆ ಬದ್ಧತೆಯ ಕುರಿತು ಅವರ ಬೋಧನೆಗಳು ತಲೆಮಾರುಗಳಾದ್ಯಂತ ಅನ್ವೇಷಕರೊಂದಿಗೆ ಪ್ರತಿಧ್ವನಿಸುತ್ತಲೇ ಇರುತ್ತವೆ, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಲ್ಲಿ ಅವರ ಶಾಶ್ವತ ಪರಂಪರೆಯನ್ನು ಗಟ್ಟಿಗೊಳಿಸುತ್ತವೆ. ಅವರನ್ನು ಅವರ ಅನುಯಾಯಿಗಳು ಕಲಿಯುಗ ಕಾಮಧೇನು (ಆಸೆಗಳನ್ನು ಪೂರೈಸುವ ಹಸು) ಮತ್ತು ಕಲ್ಪವೃಕ್ಷ (ಆಸೆಗಳನ್ನು ಪೂರೈಸುವ ದೈವಿಕ ವೃಕ್ಷ) ಎಂದು ಪೂಜಿಸುತ್ತಾರೆ.
ರಾಘವೇಂದ್ರ ಸ್ವಾಮಿಯನ್ನು ಪ್ರಹ್ಲಾದನ ಅವತಾರವೆಂದು ವ್ಯಾಪಕವಾಗಿ ಭಕ್ತರು ಹೊಂದಿರುವ ನಂಬಿಕೆಯಾಗಿದೆ.
ಕಲಿಯುಗದ ಕಾಮಧೇನು
🌺🌺🌺🌺🌺🌺🌺
*#ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ #ಆರಾಧನಾ* ಮಹೋತ್ಸವ.
🌺🌺🌺🌺🌺🌺🌺
*ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ|* *ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||*
ಕಲಿಯುಗದಲ್ಲಿ ಕಾಮಧೇನುವಿನಂತೆ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಿರುವ ರಾಯರು 353 ವರ್ಷಗಳ ಹಿಂದೆ ಸಶರೀರರಾಗಿ(ಜೀವಂತ) ಬೃಂದಾವನ ಪ್ರವೇಶ ಮಾಡುತ್ತಾರೆ. ಅಂದಿನಿಂದಲೂ ರಾಯರ ಆರಾಧನೆಯನ್ನು ಪ್ರತಿವರ್ಷ ಅತಿ ವೈಭವದಿಂದ ಮಾಡಲಾಗುತ್ತಿದೆ.
ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ "ಆರಾಧನೆ"ಯ ಪರ್ವಕಾಲ.
ಮಂತ್ರಾಲಯ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದಿದ್ದರೂ ಅಡ್ಡಿಯಿಲ್ಲ, ನಿಮ್ಮ ಸಮೀಪದ ಮೃತ್ತಿಕಾ ವೃಂದಾವನ ಸನ್ನಿಧಾನಗಳಿಗೆ ಭೇಟಿ ನೀಡಿ ಗುರುಗಳ ದರ್ಶನ ಮಾಡಿ ಅನುಗ್ರಹ ಪಡೆಯಿರಿ. ಕಾರಣ ರಾಯರು ಆರಾಧನಾ ಪರ್ವಕಾಲದಲ್ಲಿ ಅತ್ಯಂತ ಜಾಗೃತರಾಗಿ ನಮ್ಮನ್ನು ಗಮನಿಸಿ ಹಾರೈಸುತ್ತಾರೆ ಎಂಬುದು ಸರ್ವವಿಧಿತ.
*ಶ್ರೀಹಂಸನಾಮಕ ಪರಮಾತ್ಮನಿಂದ ಆರಂಭಗೊಂಡ ಪರಂಪರೆಯಲ್ಲಿ, ಶ್ರೀವೇದವ್ಯಾಸರು ಶ್ರೀಮದಾನಂದತೀರ್ಥ(ಶ್ರೀಮಧ್ವಾಚಾರ್ಯ) ರೆಂಬ ಬೀಜವನ್ನು ನೆಟ್ಟರು, ಅದು ಮೊಳಕೆಯೊಡೆದು ಜಯಮುನಿ(ಶ್ರೀಮದ್ಜಯತೀರ್ಥರು)ಎಂಬ ಮರವಾಯಿತು. ಈ ವೃಕ್ಷದಲ್ಲಿ ಶ್ರೀವ್ಯಾಸತೀರ್ಥ ಮುನಿಗಳೆಂಬ ರೆಂಬೆ ಕೊಂಬೆ ಬೆಳೆದು, ಶ್ರೀವಿಜಯೀಂದ್ರರೆಂಬ ಪುಷ್ಪಗಳಿಂದ ಶೋಭಿಸಿತು, ಅದೇ ವೃಕ್ಷ ಶ್ರೀಮದ್ರಾಘವೇಂದ್ರತೀರ್ಥರೆಂಬ ಫಲವನ್ನು ಜಗತ್ತಿಗೆ ನೀಡಿತು ಎಂದು ಶ್ರೀವಾದೀಂದ್ರತೀರ್ಥರು 'ಗುರುಗುಣಸ್ತವನ'ದಲ್ಲಿ ಹಾಡಿ ಹೊಗಳಿದ್ದಾರೆ.*
ಅಂತಹ ಶ್ರೀರಾಘವೇಂದ್ರತೀರ್ಥರಲ್ಲಿ ಶ್ರೀಹರಿಯ ಜತೆ ವಾಯುದೇವರು ನಿತ್ಯ ಆವೇಶಯುಕ್ತರಾಗಿರುತ್ತಾರೆ. ರಾಯರು ಕುಳಿತಿರುವ ಬೃಂದಾವನದಲ್ಲಿ ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರ ಸಹಿತ, ರಾಯರವರೆಗಿನ ಎಲ್ಲ ಪೂರ್ವೀಕ(ಹಿಂದಿನ) ಗುರುಗಳ ಸನ್ನಿಧಾನವಿರುತ್ತದೆ. ಹಾಗಾಗಿಯೇ ಇಕ್ಷ್ವಾಕು ಕುಲತಿಲಕ ಶ್ರೀರಾಮಚಂದ್ರದೇವರ ಹೆಸರನ್ನು ಹೊಂದಿರುವ "ಶ್ರೀರಾಘವೇಂದ್ರ" ಗುರು ಸಾರ್ವಭೌಮರನ್ನು ಸ್ಮರಿಸಿದರೆ ಸಾಕು ಅಧಿಕ ಫಲ ದೊರೆಯುತ್ತದೆ . ಇಂತಹ ಮಹಾನುಭಾವರನ್ನು ಸ್ಮರಿಸುವ ಸಮಯವಿದು.
ರಾಯರ ಕರುಣೆಗೆ ಎಣೆಯಿಲ್ಲ, ಜಗದಲ್ಲಿ ಅವರ ಕೀರ್ತಿಗೆ ಸಾಟಿಯಿಲ್ಲ. ವಿಶ್ವದಲ್ಲೇ ವರ್ಧಂತಿ(ಹುಟ್ಟುಹಬ್ಬ) ಹಾಗೂ ಆರಾಧನೆಯನ್ನು "ಸಪ್ತರಾತ್ರೋತ್ಸವ"ದ ಹೆಸರಿನಲ್ಲಿ ಏಳು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜಾತಿ, ಮತ ಭೇದವಿಲ್ಲದೆ ಆಚರಿಸುವುದೆಂದರೆ 'ರಾಯರ' ಉತ್ಸವ ಮಾತ್ರ. ಬೇರೆ ಯಾವುದೇ ಧರ್ಮ, ಮತ, ಪರಂಪರೆಯಲ್ಲಿ ಇಂತಹ ವಿಶೇಷ ಕಾಣಲು ಸಾಧ್ಯವೇ ಇಲ್ಲ. ಇಂತಹ ಯತಿಗಳನ್ನು ಕಾಣಲೂ ಸಾಧ್ಯವಿಲ್ಲ. ಅಂತಹ ಮಹಿಮಾತೀತರು ರಾಯರು.
ಬೃಂದಾವನವಾಗುವುದಕ್ಕೆ ಮೊದಲು ಅಸಾಧ್ಯವೆನಿಸುವಷ್ಟು ಪವಾಡಗಳನ್ನು ನಡೆಸಿರುವ ಗುರುಗಳು, ದೇಶ ವಿದೇಶಿಯ ಕೋಟ್ಯಾನುಕೋಟಿ ಭಕ್ತರನ್ನು ಹೊಂದಿದ್ದಾರೆ. ದೇಶಿಯ ಭಾಷೆಯನ್ನು ಮಾತ್ರ ಅರಿತಿದ್ದ ರಾಯರು, ವೃಂದಾವನಸ್ಥರಾದ ಮೇಲೆ ಅನೇಕ ವರ್ಷಗಳ ನಂತರ 1800ರಲ್ಲಿ ಬ್ರಿಟೀಷ್ ಅಧಿಕಾರಿ ಸರ್.ಥಾಮಸ್ ಮುನ್ರೋ ಜತೆ ಅವರದೇ ಭಾಷೆಯಲ್ಲಿ ವೃಂದಾವನದೊಳಗಿಂದಲೇ ಸಂಭಾಷಣೆ ನಡೆಸಿದ್ದು ಅತಿ ಮಹತ್ವವಾದ ಸಂಗತಿ. ಆತನಿಗೆ ಮಾತ್ರ ದರ್ಶನ ನೀಡಿ, ಮಂತ್ರಾಕ್ಷತೆ ಅನುಗ್ರಹಿಸಿದ್ದು ಮತ್ತೊಂದು ದಾಖಲೆಯೇ ಸರಿ.
ಇದರಿಂದ ವಿಸ್ಮಯಗೊಂಡ ಅಧಿಕಾರಿ ರಾಯರ ಪವಾಡವನ್ನು ಹೊಗಳಿ, ಈ ವಿಷಯವನ್ನು ಬರೆದಿರುವ ದಾಖಲೆಯನ್ನು ಮದ್ರಾಸು ಗೆಜೆಟಿಯರ್ ನಲ್ಲಿ ಇಂದಿಗೂ ನೋಡಬಹುದು.
ದಡ್ಡ ವೆಂಕಣ್ಣನಿಗೆ ಪೂರ್ಣಪ್ರಮಾಣದ ಅಕ್ಷರ ಜ್ಞಾನ ನೀಡಿ ದಿವಾನರಾಗಿಸಿದ್ದು ಸಣ್ಣ ಸಾಧನೆಯೇನಲ್ಲ. ರಾಯರು ನಡೆದಾಡುತ್ತಿದ್ದಾಗಲೂ ಸಾಕಷ್ಟು ಪವಾಡ ನಡೆಸಿದ್ದಾರೆ. ಈಗ ವೃಂದಾವನದಲ್ಲಿ ಕುಳಿತು ನರಹರಿಯನ್ನು ಜಪಿಸುತ್ತಲೇ ಸಹಸ್ರಾರು ಮಂದಿ ಪಾಮರರನ್ನು ಉದ್ಧಾರಗೊಳಿಸುತ್ತಿದ್ದಾರೆ. ನೊಂದವರ ನೋವಿಗೆ ಮರಳುಗಾಡಿನಲ್ಲಿ ಮಂದಾನಿಲ(ತಂಗಾಳಿ) ಬೀಸುವಂತೆ ಅಗೋಚರ ರೂಪದಲ್ಲಿ ಸಾಂತ್ವನ ನೀಡಿ, ತಮ್ಮ ಭಕ್ತರನ್ನು ಸಾಂಗತ್ಯದೊಂದಿಗೆ ಕಾಯುತ್ತಿದ್ದಾರೆ ಪರಮ ಕರುಣಾಳುಗಳು.
ಇಂತಹ ಮಹಾನುಭಾವರು ಸಾಧ್ವಿ ಗೋಪಿಕಾಂಬಾದೇವಿ ಹಾಗೂ ಶ್ರೀವೀಣಾ ತಿಮ್ಮಣ್ಣಭಟ್ಟರ ಸುಪುತ್ರ ಶ್ರೀವೆಂಕಟನಾಥಾಚಾರ್ಯರಾಗಿ ಕ್ರಿ.ಶ 1595ರಲ್ಲಿ ಹಿಂದೂ ಪಂಚಾಂಗದ ಪ್ರಕಾರ ಶ್ರೀ ಶಾಲಿವಾಹನ ಶಕೆ 1518ನೇ ಶ್ರೀಮನ್ಮಥನಾಮ ಸಂವತ್ಸರ, ಶುದ್ಧ ಸಪ್ತಮಿ, ಗುರುವಾರ, ಮೃಗಶಿರಾ ನಕ್ಷತ್ರದಲ್ಲಿ ಕುಂಭಕೋಣಂ ಸಮೀಪದ ಭುವನಗಿರಿಯಲ್ಲಿ ಅವತರಿಸಿದರು.
ಆರಂಭದಲ್ಲಿ ತಂದೆ ಶ್ರೀತಿಮ್ಮಣ್ಣಭಟ್ಟರು ಹಾಗೂ ಭಾವ ಶ್ರೀಲಕ್ಷ್ಮೀ ನರಸಿಂಹಾಚಾರ್ಯರಲ್ಲಿ ಕೆಲಕಾಲ ವಿದ್ಯಾಭ್ಯಾಸ ನಡೆಸಿದರು. ನಂತರ ದ್ವೈತ ವಿದ್ಯಾ ಸಾಮ್ರಾಜ್ಯಾಧಿಪತಿಗಳು, 64 ವಿದ್ಯೆಗಳಲ್ಲಿ ನಿಪುಣರಾಗಿದ್ದ ಶ್ರೀವಿಜಯೀ೦ದ್ರತೀರ್ಥರು ಹಾಗೂ ಅವರ ಕರಕಮಲ ಸಂಜಾತರಾದ ಶ್ರೀಸುಧೀಂದ್ರತೀರ್ಥರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು.
ಸಾಧ್ವಿ ಸರಸ್ವತಿಬಾಯಿಯನ್ನು ವಿವಾಹವಾಗಿ ಶ್ರೀಲಕ್ಷ್ಮೀನಾರಾಯಣಾಚಾರ್ಯರೆಂಬ ಸುಪುತ್ರರನ್ನು ಪಡೆದರು. ಒಂದು ದಿನ ವಾಗ್ದೇವಿಯ ಅಣತಿಯಂತೆ ಕ್ರಿ.ಶ 1621ರಂದು ಶ್ರೀಶಾಲಿವಾಹನ ಶಕೆ 1542ನೇ ಶ್ರೀದುರ್ಮತಿ ನಾಮ ಸಂವತ್ಸರದ ಫಾಲ್ಗುಣ ಶುಕ್ಲ ಬಿದಿಗೆಯಂದು ಶ್ರೀಸುಧೀಂದ್ರತೀರ್ಥರಿಂದ ಸನ್ಯಾಸಾಶ್ರಮ ಸ್ವೀಕರಿಸಿ *ಶ್ರೀರಾಘವೇಂದ್ರತೀರ್ಥ* ರೆಂಬ ಅಭಿದಾನ ಪಡೆದು ವೇದಾಂತ ಸಾಮ್ರಾಜ್ಯ ಸಿಂಹಾಸನವೇರಿದರು.
ಆಶ್ರಮವನ್ನಿತ್ತ ಶ್ರೀಸುಧೀಂದ್ರತೀರ್ಥರು ನವವೃಂದಾವನದಲ್ಲಿ ವೃಂದಾವನಸ್ಥರಾದ ಮೇಲೆ ಕ್ರಿ.ಶ 1623ರಂದು ವೇದಾಂತ ಸಾಮ್ರಾಜ್ಯಾಧಿಕಾರ ವಹಿಸಿಕೊಂಡರು.50 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿ, ಹಲವಾರು ಪವಾಡಗಳನ್ನು ನಡೆಸಿ, ಕ್ರಿ.ಶ 1671ರ ಶ್ರೀವಿರೋಧಿಕೃತ್ ನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು ತುಂಗಾನದಿ ತೀರದಲ್ಲಿರುವ ಮಂಚಾಲೆ ಗ್ರಾಮದಲ್ಲಿ ಶ್ರೀರಾಮದೇವರು ಲಂಕಾಪಟ್ಟಣಕ್ಕೆ ತೆರಳುವ ಸಮಯದಲ್ಲಿ ಕೆಲಕಾಲ ಕುಳಿತು ವಿಶ್ರಮಿಸಿದ್ದ ಬಂಡೆಯಿಂದ ಸಿದ್ಧಪಡಿಸಿದ ವೃಂದಾವನದಲ್ಲಿ ರಾಯರು ಸಶರೀರವಾಗಿ ಪ್ರವೇಶ ಮಾಡಿದರು.
ಪರಮ ಪವಿತ್ರವಾದ ಮಂತ್ರಾಲಯ ಕ್ಷೇತ್ರದಲ್ಲಿ ನೆಲೆನಿಂತ ಗುರುಗಳು, ಇಂದಿಗೂ ವೃಂದಾವನದೊಳಗಿಂದ ನಂಬಿದ ಭಕ್ತರ ಬೆನ್ನು ಕಾಯುತ್ತಿದ್ದಾರೆ. ರಾಯರು ವೃಂದಾವನದಲ್ಲಿ ಕುಳಿತ ದಿನವನ್ನು *ಆರಾಧನೆ* ಎಂಬ ಹೆಸರಲ್ಲಿ ಆಚರಿಸಲಾಗುತ್ತದೆ.
*ರಾಯರಿಗೆ ಇಷ್ಟು ಬಲ ಬರಲು ಕಾರಣ ಅವರು ಧರಿಸಿದ ಅವತಾರಗಳು.*
ಶಂಖುಕರ್ಣನೆಂಬ ದೇವತೆ ಶ್ರೀಹರಿಯ ಸಂಕಲ್ಪದಂತೆ ಬ್ರಹ್ಮದೇವರಿಂದ ಶಾಪರೂಪದ ವರವನ್ನು ಪಡೆಯುತ್ತಾನೆ. ಈ ದೇವತೆ ಕೃತಯುಗದಲ್ಲಿ ಪ್ರಹ್ಲಾದನಾಗಿ ಅವತರಿಸಿ, ಶ್ರೀನೃಸಿಂಹ ದೇವರನ್ನು ನುತಿಸಿ ಅನುಗ್ರಹಿತನಾಗುತ್ತಾನೆ. ಈ ಸಂದರ್ಭದಲ್ಲಿ ಬಾಲಕ ಪ್ರಹ್ಲಾದರನ್ನು ವೈಕುಂಠಕ್ಕೆ ಬರುವಂತೆ ಶ್ರೀಹರಿ ಕರೆದಾಗ ತನ್ನವರನ್ನೆಲ್ಲಾ ಜತೆಗೆ ಕರೆದೊಯ್ದರೆ ತಾನೂ ಬರುವುದಾಗಿ ಹೇಳುತ್ತಾರೆ. ನಸುನಕ್ಕ ನರಹರಿಯು ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂಬ ಅಭಯ ನೀಡುತ್ತಾನೆ.
ಶಂಖುಕರ್ಣ ಮತ್ತೆ ದ್ವಾಪರಯುಗದಲ್ಲಿ ಬಾಹ್ಲೀಕರಾಜನಾಗಿ ಅವತರಿಸಿ, ಶ್ರೀಕೃಷ್ಣದೇವರು ಹಾಗೂ ಭೀಮಸೇನರನ್ನು ಮೆಚ್ಚಿಸಿ ಅನುಗ್ರಹಿತರಾಗುತ್ತಾರೆ. ನಂತರ ಕಲಿಯುಗದಲ್ಲಿ ಶ್ರೀವ್ಯಾಸತೀರ್ಥರಾಗಿ ಅವತರಿಸಿ 732 ಪ್ರಾಣದೇವರ(ಹನುಮಂತ) ವಿಗ್ರಹ ಪ್ರತಿಷ್ಠಾಪಿಸುತ್ತಾರೆ. ನಂತರ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರಾಗಿ ಅವತರಿಸಿ ಲೋಕಕಲ್ಯಾಣ ನಡೆಸುತ್ತಿದ್ದಾರೆ.
ಅಂದು ಶ್ರೀಪ್ರಹ್ಲಾದರಾಜರಿಗೆ ನರಹರಿ ನೀಡಿದ್ದ ಅಭಯ ವಚನವನ್ನು ಇಂದು ನಿಜವಾಗಿಸುತ್ತಿದ್ದಾನೆ. ರಾಯರನ್ನು ಸೇವಿಸುವ ರಾಯರ ಮಂದಿಗೆ,ಸಕಲ ಸನ್ಮಂಗಳ ಕರುಣಿಸುವ ಮೂಲಕ ಕಲಿಯುಗದಲ್ಲಿ "ಭುವಿಯಲ್ಲೇ" ವೈಕುಂಠ ಸುಖವನ್ನು ಶ್ರೀಹರಿ ಕರುಣಿಸುತ್ತಿದ್ದಾನೆ.
ಇದಲ್ಲವೇ ರಾಯರ ಶಕ್ತಿ...!!!.
ಕಡು ಕರುಣಿ, ಪರಮ ಕರುಣಾಳು ಎಂಬ ಬಿರುದುಗಳ ಧಣಿ, ಅಗಣಿತ ಗುಣಗಳ ಗಣಿ, ಭಕ್ತರ ಪಾಲಿನ ದಿನಮಣಿ.
ಶ್ರೀರಾಘವೇಂದ್ರ ಗುರು ಸಾರ್ವಭೌಮರೆಂಬ ಹೆಸರಿನಿಂದ ಜಗತ್ತಿಗೆ ಚಿರಪರಿಚಿತರಾದ ಗುರುಗಳ ಆರಾಧನೆಯ ಪರ್ವಕಾಲದಲ್ಲಿ ಅವರನ್ನು ವಿಶೇಷವಾಗಿ ಸ್ಮರಿಸೋಣ. ಅವರ ಅನುಗ್ರಹವನ್ನು ನಮ್ಮಹೃದಯದಲ್ಲಿ ಧರಿಸೋಣ.
*ದುರ್ವಾದಿಧ್ವಾಂತರವಯೇ ವೈಷ್ಣವೇಂದಿವರೇಂದವೆ ।*
*ಶ್ರೀರಾಘವೇಂದ್ರಗುರವೇ ನಮೋ ಅತ್ಯಂತ ದಯಾಲವೇ ।।*
ವರಾಯರ ಕರುಣೆ ಎಂತಹುದು ಎಂಬುದು ಬಲ್ಲವರಿಗಷ್ಟೇ ಗೊತ್ತು. *ಬಲ್ಲವನೇ ಬಲ್ಲ ಬೆಲ್ಲದ ಸಿಹಿಯ* ಎಂಬಂತೆ ರಾಯರ ಕರುಣಾ ಛತ್ರದಲ್ಲಿ ಸುರಕ್ಷಿತವಾಗಿ ನೆಮ್ಮದಿಯ ಜೀವನ ನಡೆಸುವವರಿಗೆ ರಾಯರ ಕೃಪೆ ಎಂತಹುದು ಎಂಬ ಅರಿವು ಸದಾ ಇರುತ್ತದೆ.
ಇಂತಹ ಪರಮ ಕರುಣಾಳುಗಳಾದ ರಾಯರ ಉಪಾಸ್ಯಮೂರ್ತಿ ಶ್ರೀಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಾಮದೇವರಲ್ಲಿ ಶಿರಸಾ ಬೇಡೋಣ.
ಗುರುಗಳನ್ನು ನಂಬಿ, ಭಜಿಸಿ, ಕೃತಾರ್ಥರಾಗೋಣ...💐💐
*ರಾಯರೇ ಗತಿಯು ನಮಗೆ, ರಾಯರೇ ಮತಿಯು...*
ಜೀಯಾ ನೀನಲ್ಲದೆ ಇನ್ನಾರು ಕಾಯ್ವರೋ.....🙏🙏🙏
-
1:02:50
Flyover Conservatives
9 hours agoEric Trump: America’s Most Subpoenaed Man SPEAKS OUT! | FOC Show
20.8K5 -
LIVE
PandaSub2000
1 day agoLIVE 10/3 @10pm ET | SUPER MARIO GALAXY 1 & 2 on SWITCH 2
191 watching -
1:26:04
Glenn Greenwald
7 hours agoJournalist Ken Klippenstein on Trump's New Domestic Terrorism Memo; Glenn Takes Your Questions on Bari Weiss's CBS Role, His Interview with Nick Fuentes, and More | SYSTEM UPDATE #526
75.8K56 -
LIVE
SynthTrax & DJ Cheezus Livestreams
2 days agoFriday Night Synthwave 80s 90s Electronica and more DJ MIX Livestream GOTH NIGHT Special Edition
364 watching -
2:20:47
Mally_Mouse
5 days agoFriend Friday!! 🎉 - Let's Play! - Lockdown Protocol
29.5K1 -
LIVE
MissesMaam
4 hours ago*Spicy* Friend Friday LOCKDOWN Protocol!!! :: SpookTober 💚✨
199 watching -
41:36
MattMorseTV
5 hours ago $0.80 earned🔴Portland just made a BIG MISTAKE.🔴
43.6K71 -
13:10:23
LFA TV
1 day agoLIVE & BREAKING NEWS! | FRIDAY 10/3/25
165K46 -
4:07:27
Nerdrotic
9 hours ago $0.33 earnedHollywood is TARIFFied, James Gunn Attacks Fans, Bill Burqa, RoP is Doomed | Friday Night Tights 374
76.1K12 -
LIVE
Eternal_Spartan
13 hours ago🟢 Eternal Spartan Plays Destiny 2 | The Best PVP/PVE Action!| USMC Veteran
31 watching