ಸೂರ್ಯ ಗ್ರಹಣ

3 months ago
2

ಮಹಾಲಯ ಅಮಾವಾಸ್ಯೆ ಇರುವಂಥ ಸೆಪ್ಟೆಂಬರ್ ಇಪ್ಪತ್ತೊಂದನೇ ತಾರೀಕಿನ ಭಾನುವಾರದಂದು ಸಿಂಹ ರಾಶಿಯಲ್ಲಿ ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಅಲ್ಲದೇ ಇದೆ ದಿನ ಮಹಾಲಯ ಅಮಾವಾಸ್ಯೆ ಅಂದರೆ ಪಿತೃ ಪಕ್ಷದ ಕೊನೆಯ ದಿನ ಬಂದಿದೆ. ಈ ಗ್ರಹಣದ ಗೋಚರವು ಭಾರತದಲ್ಲಿ ಆಗುವುದಿಲ್ಲ. ಈ ಗ್ರಹಣವು ರಾತ್ರಿ 11 ಗಂಟೆಗೆ ಸಂಭವಿಸುತ್ತದೆ, ಇದರ ಸೂತಕ ಅವಧಿಯು 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ, ಅಂದರೆ, ಸೂತಕ ಅವಧಿಯು ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾಗುತ್ತದೆ. ಗ್ರಹಣದ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ, ಈ ಕಾರಣದಿಂದಾಗಿ, ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಆಚರಣೆಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎನ್ನಲಾಗುತ್ತಿದೆ.

Loading comments...