ಶೈಲಪುತ್ರಿ

3 months ago
1

ನವರಾತ್ರಿಯ ಮೊದಲ ದಿನವನ್ನು ಶಕ್ತಿ ದೇವಿಯ ಶೈಲಪುತ್ರಿ ರೂಪದ ಆರಾಧನೆಗೆ ಮೀಸಲಾಗಿರುತ್ತದೆ. "ಶೈಲಪುತ್ರಿ" ಅಂದರೆ ಪರ್ವತ ರಾಜ ಹಿಮವಂತನ ಮಗಳು ಎಂಬರ್ಥ. ಅವಳು ದೇವಿಯ ಒಂಬತ್ತು ರೂಪಗಳಲ್ಲಿ ಮೊದಲನೆಯದು. ಈ ದಿನ ಭಕ್ತರು ಬಿಳಿ ಬಣ್ಣದ ಹೂವು, ವಸ್ತ್ರ ಹಾಗೂ ನೈವೇದ್ಯವನ್ನು ಅರ್ಪಿಸಿ ದೇವಿಯ ಆಶೀರ್ವಾದ ಪಡೆಯಲು ಪ್ರಯತ್ನಿಸುತ್ತಾರೆ. ಶೈಲಪುತ್ರಿ ದೇವಿಯ ಪೂಜೆಯಿಂದ ಆರೋಗ್ಯ, ಶಾಂತಿ ಹಾಗೂ ಆಧ್ಯಾತ್ಮಿಕ ಶಕ್ತಿ ದೊರೆಯುತ್ತದೆ ಎಂದು ನಂಬಿಕೆ ಇದೆ. ನವರಾತ್ರಿಯ ಆರಂಭದಲ್ಲೇ ದೇವಿಯ ಈ ರೂಪದ ಆರಾಧನೆ, ಶಕ್ತಿ ಮತ್ತು ಭಕ್ತಿಯ ದಾರಿಯನ್ನು ತೆರೆದು ಕೊಡುತ್ತದೆ.

Loading comments...